FACT CHECK | ಟ್ರಂಪ್ ಪದಗ್ರಹಣ ಸಮಾರಂಭದಲ್ಲಿ ಜೈಶಂಕರ್ ಅವರನ್ನು ಎದ್ದು ಹೋಗಲು ಸೂಚಿಸಲಾಗಿತ್ತೇ?; ವಾಸ್ತವಾಂಶ ಇಲ್ಲಿದೆ...
PC : boomlive.in
ಹೊಸದಿಲ್ಲಿ: ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಪದಗ್ರಹಣ ಸಮಾರಂಭದ ವೀಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಕಾರ್ಯಕ್ರಮದ ಮಧ್ಯದಲ್ಲಿಯೇ ಎದ್ದು ಹೋಗುವಂತೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರಿಗೆ ಸೂಚಿಸುತ್ತಿರುವುದನ್ನು ತೋರಿಸುತ್ತಿರುವುದಾಗಿ ಅದು ಹೇಳಿಕೊಂಡಿದೆ. ಆದರೆ ಇದು ಅಪ್ಪಟ ಸುಳ್ಳು ಎನ್ನುವುದನ್ನು boomlive.in ವೆಬ್‌ಸೈಟ್‌ನ ಫ್ಯಾಕ್ಟ್‌ಚೆಕ್ ಡೆಸ್ಕ್ ಬಯಲಿಗೆಳೆದಿದೆ.
ವೀಡಿಯೊದ ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಳ್ಳಲು ಬೂಮ್ ಸಮಾರಂಭದ ಲೈವ್ ಸ್ಟ್ರೀಮಿಂಗ್‌ನ್ನು ಪರಿಶೀಲಿಸಿದಾಗ ಸಿಬ್ಬಂದಿಯೋರ್ವರು ಛಾಯಾಚಿತ್ರಗಳನ್ನು ಕ್ಲಿಕ್ಕಿಸುತ್ತಿದ್ದ ಮಹಿಳಾ ಫೋಟೊಗ್ರಾಫರ್‌ಗೆ ಮುಂದಿನ ಸಾಲಿನಿಂದ ಹಿಂದಕ್ಕೆ ಹೋಗುವಂತೆ ಸೂಚಿಸಿದ್ದರು, ಜೈಶಂಕರಗಲ್ಲ ಎನ್ನುವುದು ಸಷ್ಟವಾಗಿದೆ.
ಜೈಶಂಕರ ಅವರು ಸಮಾರಂಭದಲ್ಲಿ ಜಪಾನ್ ಮತ್ತು ಆಸ್ಟ್ರೇಲಿಯಾಗಳ ವಿದೇಶಾಂಗ ಸಚಿವರನ್ನು ಭೇಟಿಯಾಗಿದ್ದರು. ಜೈಶಂಕರ ತನ್ನ ʼಎಕ್ಸ್ʼ ಹ್ಯಾಂಡಲ್‌ನಿಂದ ಹಂಚಿಕೊಂಡಿರುವ ಚಿತ್ರಗಳಲ್ಲಿ ಅವರು ಮುಂದಿನ ಸಾಲಿನಲ್ಲಿ ಆಸೀನರಾಗಿದ್ದನ್ನು ಕಾಣಬಹುದು.
(PC : boomlive.in)
(ಪೋಸ್ಟ್ ನೋಡಲು ಇಲ್ಲಿ ಕ್ಲಿಕ್ ಮಾಡಿ. ಆರ್ಕೈವ್ ಲಿಂಕ್ ಗೆ ಇಲ್ಲಿ ಕ್ಲಿಕ್ ಮಾಡಿ)
ಲೈವ್ ಸ್ಟ್ರೀಮ್ ಆಗಿದ್ದ ಪದಗ್ರಹಣ ಸಮಾರಂಭದ ವೀಡಿಯೊ ಮಹಿಳಾ ಫೋಟೊಗ್ರಾಫರ್ ವಿವಿಧ ಕೋನಗಳಿಂದ ಛಾಯಾಚಿತ್ರಗಳನ್ನು ಸೆರೆಹಿಡಿಯುತ್ತಿದ್ದನ್ನು, ಒಂದು ಹಂತದಲ್ಲಿ ಆಕೆ ಮುಂದಿನ ಸಾಲಿನಲ್ಲಿ ಕುಳಿತಿದ್ದ ಜೈಶಂಕರ್ ಎದುರಿನಿಂದ ಹೆಜ್ಜೆಗಳನ್ನು ಹಾಕುತ್ತಿದ್ದನ್ನು, ಸಿಬ್ಬಂದಿ ಆಕೆಯ ಬಳಿ ಬಂದು ಹಿಂದಕ್ಕೆ ಹೋಗುವಂತೆ ಸೂಚಿಸಿದ್ದನ್ನು ಮತ್ತು ಫೋಟೋಗ್ರಾಫರ್ ಹಿಂದಕ್ಕೆ ತೆರಳುತ್ತಿದ್ದನ್ನು ಸ್ಪಷ್ಟವಾಗಿ ತೋರಿಸಿದೆ.
ಈ ಲೇಖನವನ್ನು ಮೊದಲು boomlive.in ಪ್ರಕಟಿಸಿದೆ. ʼಶಕ್ತಿ ಕಲೆಕ್ಟಿವ್ʼನ ಭಾಗವಾಗಿ ವಾರ್ತಾ ಭಾರತಿ ಅನುವಾದಿಸಿದೆ.