ಜಮ್ಮುಕಾಶ್ಮೀರ | ಗಡೊಲೆ ಅರಣ್ಯ ಪ್ರದೇಶದಲ್ಲಿ ನಾಪತ್ತೆಯಾಗಿದ್ದ 2ನೇ ಕಮಾಂಡರ್‌ನ ಮೃತದೇಹ ಪತ್ತೆ
Photo Credit ; NDTV
ಶ್ರೀನಗರ, ಅ. 10: ಜಮ್ಮು ಹಾಗೂ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಗಡೊಲೆ ಅರಣ್ಯಪ್ರದೇಶದಲ್ಲಿ ನಾಪತ್ತೆಯಾಗಿದ್ದ ಮತ್ತೊಬ್ಬ ಎಲೈಟ್ ಪ್ಯಾರಾ ಕಮಾಂಡೊ ಮೃತದೇಹ ಶುಕ್ರವಾರ ಪತ್ತೆಯಾಗಿದೆ.
‘‘ಅನಂತ್‌ನಾಗ್ ಜಿಲ್ಲೆಯ ಕೊಕೆರ್ನಾಗ್‌ನ ಗಡೋಲೆ ದಟ್ಟ ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭ ನಾಪತ್ತೆಯಾಗಿದ್ದ ಮತ್ತೊಬ್ಬ ಪ್ಯಾರಾ ಕಮಾಂಡೊನ ಮೃತದೇಹವನ್ನು ಭದ್ರತಾ ಪಡೆ ಪತ್ತೆ ಮಾಡಿದೆ’’ ಎಂದು ಮೂಲಗಳು ತಿಳಿಸಿವೆ.
ನಾಪತ್ತೆಯಾಗಿದ್ದ ಇನ್ನೊಬ್ಬ ಪ್ಯಾರಾ ಕಮಾಂಡೊನ ಮೃತಹೇಹವನ್ನು ಭದ್ರತಾ ಪಡೆ ಸಿಬ್ಬಂದಿ ಅರಣ್ಯ ಪ್ರದೇಶದಲ್ಲಿ ಗುರುವಾರ ಪತ್ತೆ ಮಾಡಿತ್ತು.
ಮೃತಪಟ್ಟ ಪ್ಯಾರಾ ಕಮಾಂಡೊಗಳ ಗುರುತನ್ನು ಖಚಿತಪಡಿಸಲಾಗುತ್ತಿದೆ. ಪ್ರತಿಕೂಲ ಹವಾಮಾನದಿಂದಾಗಿ ದಟ್ಟ ಅರಣ್ಯ ಪ್ರದೇಶದಲ್ಲಿ ಸಂಭವಿಸಿದ ಅಪಘಾತದಲ್ಲಿ ಇಬ್ಬರೂ ಮೃತಪಟ್ಟಿರಬಹದು ಎಂದು ಶಂಕಿಸಲಾಗಿದೆ.
ಅಕ್ಟೋಬರ್ 6ರಂದು ತಡರಾತ್ರಿ ದಟ್ಟ ಅರಣ್ಯದಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭ ಈ ಇಬ್ಬರು ಕಮಾಂಡೊಗಳು ನಾಪತ್ತೆಯಾಗಿದ್ದರು.