×
Ad

ಜಮ್ಮು/ಕಾಶ್ಮೀರ: ಸೇನಾ ಕ್ಯಾಂಪ್‌ನಲ್ಲಿ ಅಗ್ನಿ ದುರಂತ; ಇಬ್ಬರು ಮೃತ್ಯು

Update: 2023-12-23 12:56 IST

ಸಾಂದರ್ಭಿಕ ಚಿತ್ರ

ಡೋಡಾ:  ಅಗ್ನಿ ಅವಘಡದಲ್ಲಿ ಇಬ್ಬರು ಮೃತಪಟ್ಟಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಡೋಡಾ ಜಿಲ್ಲೆಯ ಸೇನಾ ಕ್ಯಾಂಪ್‌ನಲ್ಲಿ ಶನಿವಾರ ನಡೆದಿರುವ ಬಗ್ಗೆ ವರದಿಯಾಗಿದೆ.

ಮೃತರನ್ನು ಸಾಂಬಾದ ಪರಶೋತ್ತಮ್ (55) ಹಾಗೂ ಕಥುವಾದ ಸೋಮ್ ರಾಜ್‌ (45) ಎಂದು ಗುರುತಿಸಲಾಗಿದೆ. ಇವರು ಅರ್ನೋಡಾ ಘಾಟ್‌ನ ಸೇನಾ ಕ್ಯಾಂಪ್‌ನಲ್ಲಿ ಟೈಲರಿಂಗ್ ಅಂಗಡಿ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ.

ಶನಿವಾರ ಮಧ್ಯರಾತ್ರಿ , ಚಳಿಗೆ ರಕ್ಷಣೆ ಪಡೆಯುವ ಸೀಮೆ ಎಣ್ಣೆ ಹೀಟರ್‌ನಲ್ಲಿ  ಸಮಸ್ಯೆ ಉಂಟಾಗಿ ಬೆಂಕಿ ಅವಘಡ ಸಂಭವಿಸಿದೆ. ಸುಟ್ಟು ಕರಕಲಾದ ಮೃತದೇಹಗಳನ್ನು ಹೊರತೆಗೆದು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News