NSUI ಉಸ್ತುವಾರಿಯಾಗಿ ಕನ್ಹಯ ಕುಮಾರ್ ನೇಮಕ
Update: 2023-07-06 22:13 IST
Kanhaiya Kumar | Photo: PTI
ಹೊಸದಿಲ್ಲಿ: ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (NSUI)ದ ಎಐಸಿಸಿ ಉಸ್ತುವಾರಿಯನ್ನಾಗಿ ಕನ್ಹಯ ಕುಮಾರ್ ಅವರನ್ನು ಗುರುವಾರ ಕಾಂಗ್ರೆಸ್ ನೇಮಕಗೊಳಿಸಿದೆ.
ಕನೈಯಾ ಕುಮಾರ್ 2021ರಲ್ಲಿ ಸಿಪಿಐ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಅದಕ್ಕೂ ಮುನ್ನ 2015-16ರಲ್ಲಿ ಅವರು ಅಖಿಲ ಭಾರತ ವಿದ್ಯಾರ್ಥಿ ಒಕ್ಕೂಟ (AISF)ದ ಪ್ರತಿನಿಧಿಯಾಗಿ ಜೆಎನ್ಯು ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾಗಿದ್ದರು.