×
Ad

ಕಾಶ್ಮೀರ: ಕಾಡಿನ ಗುಹೆಯಲ್ಲಿ ಉಗ್ರರ ಅಡಗುದಾಣ ಪತ್ತೆ

Update: 2024-03-10 22:32 IST

Photo:ANI

ಜಮ್ಮು: ಜಮ್ಮುಕಾಶ್ಮೀರದ ಪೂಂಚ್ ಜಿಲ್ಲೆಯ ಅರಣ್ಯದಲ್ಲಿದ್ದ ಉಗ್ರರ ಅಡಗುದಾಣವೊಂದನ್ನು ಭದ್ರತಾಪಡೆಗಳು ರವಿವಾರ ಭೇದಿಸಿದ್ದು, ಸ್ಥಳದಿಂದ ಏಳು ತುಕ್ಕು ಹಿಡಿದ ಸುಧಾರಿತ ಸ್ಫೋಟಕ ಸಾಧನಗಳು (ಐಇಡಿ) ಹಾಗೂ ವಯರ್‌ಲೆಸ್ ಸೆಟ್ ಅನ್ನು ವಶಪಡಿಸಿಕೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೂರಣ್‌ಕೋಟ್‌ಪ್ರದೇಶದ ದಾರಾ ಸಾಂಗ್ಲಾದ ಅರಣ್ಯ ಪ್ರದೇಶದಲ್ಲಿ ಪೊಲೀಸರು ಹಾಗೂ ಸೇನೆ ಜಂಟಿ ಶೋಧ ಕಾರ್ಯಾಚರಣೆ ನಡೆಸಿಗುಹೆಯೊದರಲ್ಲಿದ್ದ ಉಗ್ರರ ಅಡಗುದಾಣವನ್ನು ಭೇದಿಸಿವೆ. ಸ್ಥಳದಲ್ಲಿ ಕೆಲವು ಕಂಬಳಿ ಹೊದಿಕೆಗಳು ಮತ್ತಿತರ ಸಾಮಾಗ್ರಿಗಳು ಕೂಡಾ ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ನಡೆಯುತ್ತಿದೆ ಎಂದವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News