×
Ad

ಕೇಜ್ರಿವಾಲ್‌ ನಿಷ್ಪಕ್ಷಪಾತ ವಿಚಾರಣೆಯ ಹಕ್ಕು ಹೊಂದಿದ್ದಾರೆ: ದಿಲ್ಲಿ ಸಿಎಂ ಬಂಧನಕ್ಕೆ ಜರ್ಮನಿ ಪ್ರತಿಕ್ರಿಯೆ

Update: 2024-03-23 13:05 IST

ಅರವಿಂದ್ ಕೇಜ್ರಿವಾಲ್(PTI) 

ಹೊಸದಿಲ್ಲಿ: ಅಬಕಾರಿ ನೀತಿ ಪ್ರಕರಣದಲ್ಲಿ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಬಂಧನಕ್ಕೆ ಸಂಬಂಧಿಸಿದಂತೆ ಜರ್ಮನಿಯ ಹೇಳಿಕೆಯು ಭಾರತವನ್ನು ಕೆರಳಿಸಿದೆ. ‘ಇದು ನಮ್ಮ ನ್ಯಾಯಾಂಗ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪವಾಗಿದೆ ಮತ್ತು ನಮ್ಮ ನ್ಯಾಯಾಂಗದ ಸ್ವಾತಂತ್ರ್ಯದ ಕಡೆಗಣನೆಯಾಗಿದೆ ’ ಎಂದು ಅದು ಕಟುವಾಗಿ ಹೇಳಿದೆ.

ಶನಿವಾರ ಜರ್ಮನ್ ರಾಯಭಾರ ಕಚೇರಿಯ ಉಪಮುಖ್ಯಸ್ಥ ಜಾರ್ಜ್ ಎಂಝ್ವೀಲರ್ ಅವರನ್ನು ಕರೆಸಿಕೊಂಡ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ದೇಶದ ಆಂತರಿಕ ವ್ಯವಹಾರಗಳಲ್ಲಿ ಜರ್ಮನಿಯ ವಿದೇಶಾಂಗ ಕಚೇರಿಯ ವಕ್ತಾರರ ಹೇಳಿಕೆಯ ವಿರುದ್ಧ ಅಧಿಕೃತ ಪ್ರತಿಭಟನೆಯನ್ನು ದಾಖಲಿಸಿದೆ.

‘ಇಂತಹ ಹೇಳಿಕೆಗಳನ್ನು ನಮ್ಮ ನ್ಯಾಯಾಂಗ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮತ್ತು ನಮ್ಮ ನ್ಯಾಯಾಂಗದ ಸ್ವಾತಂತ್ರ್ಯದ ಕಡೆಗಣನೆ ಎಂದು ನಾವು ಪರಿಗಣಿಸಿದ್ದೇವೆ. ಭಾರತವು ಕಾನೂನಿನ ಆಡಳಿತವನ್ನು ಹೊಂದಿರುವ ಸ್ಪಂದನಶೀಲ ಮತ್ತು ಪ್ರಬಲ ಪ್ರಜಾಪ್ರಭುತ್ವ ದೇಶವಾಗಿದೆ. ದೇಶದಲ್ಲಿನ ಮತ್ತು ಪ್ರಜಾಸತ್ತಾತ್ಮಕ ಜಗತ್ತಿನ ಇತರೆಡೆಗಳಲ್ಲಿನ ಎಲ್ಲ ಕಾನೂನು ಪ್ರಕರಣಗಳಂತೆ ಈ ವಿಷಯದಲ್ಲಿಯೂ ಕಾನೂನು ತನ್ನದೇ ಮಾರ್ಗದಲ್ಲಿ ಸಾಗುತ್ತದೆ. ಈ ಕುರಿತು ಪಕ್ಷಪಾತಿ ಗ್ರಹಿಕೆಗಳು ಅತ್ಯಂತ ಅನಗತ್ಯವಾಗಿವೆ ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.

‘ಭಾರತವು ಒಂದು ಪ್ರಜಾಪ್ರಭುತ್ವ ದೇಶವಾಗಿದೆ ಎನ್ನುವುದನ್ನು ನಾವು ಗಮನಿಸಿದ್ದೇವೆ. ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಮಾನದಂಡಗಳು ಮತ್ತು ಮೂಲಭೂತ ಪ್ರಜಾಸತ್ತಾತ್ಮಕ ತತ್ವಗಳು ಈ ಪ್ರಕರಣದಲ್ಲಿಯೂ ಅನ್ವಯವಾಗುತ್ತವೆ ಎಂದು ನಾವು ಭಾವಿಸಿದ್ದೇವೆ ಮತ್ತು ನಿರೀಕ್ಷಿಸಿದ್ದೇವೆ. ಆರೋಪಗಳನ್ನು ಎದುರಿಸುತ್ತಿರುವ ಯಾವುದೇ ವ್ಯಕ್ತಿಯಂತೆ ಕೇಜ್ರಿವಾಲ್ ಅವರು ನ್ಯಾಯಸಮ್ಮತ ಮತ್ತು ಪಕ್ಷಾತೀತ ವಿಚಾರಣೆಗೆ ಅರ್ಹರಾಗಿದ್ದಾರೆ,ಇದು ಅವರು ಯಾವುದೇ ನಿರ್ಬಂಧವಿಲ್ಲದೆ ಲಭ್ಯವಿರುವ ಎಲ್ಲ ಕಾನೂನು ಮಾರ್ಗಗಳನ್ನು ಬಳಸಿಕೊಳ್ಳುವುದನ್ನು ಒಳಗೊಂಡಿದೆ. ಯಾವುದೇ ಅಪರಾಧದ ಆರೋಪಿಯು ತಪ್ಪು ಸಾಬೀತಾಗುವವರೆಗೆ ಅಮಾಯಕನಾಗಿರುತ್ತಾನೆ ಎಂಬ ಕಾನೂನು ತತ್ವವು ಕಾನೂನಿನ ಆಡಳಿತದ ಕೇಂದ್ರಬಿಂದುವಾಗಿದೆ ಮತ್ತು ಇದು ಕೇಜ್ರಿವಾಲ್ ಅವರಿಗೂ ಅನ್ವಯವಾಗಬೇಕು ಎಂದು ಜರ್ಮನ್ ವಿದೇಶಾಂಗ ಸಚಿವಾಲಯದ ವಕ್ತಾರರು ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News