×
Ad

ವಕ್ಫ್ ಮಸೂದೆಗೆ ಕೇರಳ ಬಿಷಪ್ ಮಂಡಳಿ ಬೆಂಬಲ

Update: 2025-04-01 07:59 IST

PC: kcbc.co.in/KCBC/index

ಹೊಸದಿಲ್ಲಿ: ಪ್ರಸಕ್ತ ಸಂಸತ್ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಮಂಡಿಸಲು ಉದ್ದೇಶಿಸಿರುವ ವಕ್ಫ್ ತಿದ್ದುಪಡಿ ಮಸೂದೆಯನ್ನು ಕೇರಳದ ಎಲ್ಲ ಸಂಸದರು ಬೆಂಬಲಿಸುವಂತೆ ಕೇರಳ ಕ್ಯಾಥೋಲಿಕ್ ಬಿಷಪ್ ಗಳ ಸಂಘ (ಕೆಸಿಬಿಸಿ) ಮನವಿ ಮಾಡಿದೆ.

ಬಿಜೆಪಿ ಈ ಮನವಿಯನ್ನು ಸ್ವಾಗತಿಸಿದ್ದು, ಮಸೂದೆಗೆ ತಿದ್ದುಪಡಿ ತರುವ ಅಧಿಕಾರ ಇರುವುದು ಕೇವಲ ಸಂಸತ್ತಿಗೆ ಮಾತ್ರ ಎಂದು ಸ್ಪಷ್ಟಪಡಿಸಿದೆ. ಆದರೆ ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಈ ಮನವಿಯನ್ನು ವಿರೋಧಿಸಿದ್ದು, ಇಂಥ ಹಸ್ತಕ್ಷೇಪವನ್ನು ಖಂಡಿಸಿದೆ. ಕೆಸಿಬಿಸಿ ಕಳುಹಿಸಿರುವ ಮನವಿ ಪತ್ರ "ಪ್ರತಿಯೊಬ್ಬರಿಗೂ ತೀರಾ ಮಹತ್ವದ್ದು" ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.

ಹಲವು ಸಮುದಾಯಗಳ ಬಹಳಷ್ಟು ಸಂಘ ಸಂಸ್ಥೆಗಳು ಈ ಮಸೂದೆಯನ್ನು ಬೆಂಬಲಿಸಿವೆ. ಈ ಮಸೂದೆಯನ್ನು ಬಡ ಮುಸ್ಲಿಮರ, ಮಕ್ಕಳ ಮತ್ತು ಮಹಿಳೆಯರ ಹಿತಾಸಕ್ತಿ ಕಾಪಾಡುವ ಸಲುವಾಗಿ ಮತ್ತು ವಕ್ಫ್ ಪಾರದರ್ಶಕವಾಗಿ ತನ್ನ ಆಸ್ತಿಗಳನ್ನು ನಿರ್ವಹಿಸಬೇಕು ಎಂಬ ಉದ್ದೇಶದಿಂದ ತರಲಾಗುತ್ತಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಈ ಮಸೂದೆಯನ್ನು ವಿರೋಧಿಸುವವರು ವಕ್ಫ್ ಆಸ್ತಿಗಳನ್ನು ಒತ್ತುವರಿ ಮಾಡಿಕೊಂಡಿರುವ ಕೆಲ ಪ್ರಭಾವಿ ವ್ಯಕ್ತಿಗಳು. ವಿಷಯಗಳನ್ನು ಟೀಕಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ ಆದರೆ ಟೀಕೆಯಲ್ಲಿ ಹುರುಳು ಇರಬೇಕು ಎಂದಿದ್ದಾರೆ.

ಮಸೂದೆಯನ್ನು ಬೆಂಬಲಿಸುವಂತೆ ಕೆಸಿಬಿಸಿ ಮಾಡಿಕೊಂಡಿರುವ ಮನವಿಗೆ ವಿವಿಧ ರಾಜಕೀಯ ಪಕ್ಷಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಈ ಮನವಿಯನ್ನು ಸ್ವಾಗತಿಸಿದ್ದು, ಕಾಂಗ್ರೆಸ್ ನ ಹುಸೈನ್ ದಿಲ್ವಾಯಿ ಟೀಕಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News