×
Ad

ಬಿಜೆಪಿ ಸಂಸದರು ತಳ್ಳಿದ್ದರಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ನನ್ನ ಮೊಣಕಾಲಿಗೆ ಏಟಾಗಿದೆ: ಲೋಕಸಭಾ ಸ್ಪೀಕರ್ ಗೆ ಮಲ್ಲಿಕಾರ್ಜುನ ಖರ್ಗೆ ಪತ್ರ

Update: 2024-12-19 13:58 IST

Photo credit: PTI

ಹೊಸದಿಲ್ಲಿ: ಬಿಜೆಪಿ ಪಕ್ಷದ ಸಂಸದರು ಸಂಸತ್ತಿನಲ್ಲಿ ನಡೆಸಿದ ತಳ್ಳಾಟದಿಂದಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗದ ತನ್ನ ಮೊಣಕಾಲಿಗೆ ಏಟಾಗಿದೆ ಎಂದು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ.

"ಬಿಜೆಪಿ ಸಂಸದರು ನಮ್ಮನ್ನು ಎಳೆದಾಡಿದ್ದು, ನೆಲದ ಮೇಲೆ ಕುಳಿತುಕೊಳ್ಳುವಂತೆ ತಳ್ಳಿದ್ದಾರೆ. ಇದರಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ನನ್ನ ಮೊಣಕಾಲುಗಳಿಗೆ ಗಾಯವಾಗಿದೆ" ಎಂದು ಖರ್ಗೆ ಅವರು ಹೇಳಿದ್ದಾರೆ.

"ನಂತರ, ಕಾಂಗ್ರೆಸ್ ಸಂಸದರು ನನಗೆ ಕುರ್ಚಿಯನ್ನು ತಂದು, ನನ್ನನ್ನು ಅದರ ಮೇಲೆ ಕೂರಿಸಿದರು. ಬಹಳ ಕಷ್ಟದಿಂದ, ನನ್ನ ಸಹವರ್ತಿಗಳ ಬೆಂಬಲದೊಂದಿಗೆ, ಬೆಳಿಗ್ಗೆ 11 ಗಂಟೆಗೆ ಸದನಕ್ಕೆ ಕುಂಟುತ್ತಾ ಬಂದೆ" ಎಂದು ಖರ್ಗೆ ತಮ್ಮ ಪತ್ರದಲ್ಲಿ ಹೇಳಿದ್ದಾರೆ.

82 ವರ್ಷದ ಖರ್ಗೆ ಅವರ ಎಡ ಮೊಣಕಾಲಿಗೆ ಮೇಲೆ 2017 ರಲ್ಲಿ ದಿಲ್ಲಿಯ ಏಮ್ಸ್‌ನಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು.

ಅಂಬೇಡ್ಕರ್‌ ಕುರಿತ ಅಮಿತ್‌ ಶಾ ಹೇಳಿಕೆ ವಿರುದ್ಧ ಸಂಸತ್ತಿನ ಮಕರ ದ್ವಾರದ ಮುಂದೆ ಪ್ರತಿಭಟನಾನಿರತ ಇಂಡಿಯಾ ಮೈತ್ರಿ ಕೂಟ ಮತ್ತು ಬಿಜೆಪಿ ಸಂಸದರು ಮುಖಾಮುಖಿಯಾದಾಗ ನೂಕಾಟ ತಳ್ಳಾಟ ನಡೆದಿದೆ. ಘಟನೆಯಲ್ಲಿ ಗಾಯಗೊಂಡ ಸಂಸದ ಸಾರಂಗಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News