×
Ad

ಖ್ಯಾತ ಖಗೋಳ ಭೌತಶಾಸ್ತ್ರಜ್ಞ, ದಿ.ಜಯಂತ ನಾರಳೀಕರ್‌ ಅವರಿಗೆ ವಿಜ್ಞಾನ ರತ್ನ ಪ್ರಶಸ್ತಿ

ಯೂಸುಫ್ ಮುಹಮ್ಮದ್‌ ಶೇಖ್ ಸೇರಿದಂತೆ 8 ವಿಜ್ಞಾನಿಗಳಿಗೆ ವಿಜ್ಞಾನ ಶ್ರೀ ಪ್ರಶಸ್ತಿ

Update: 2025-10-25 23:34 IST

Source: Facebook/Krishna Kumar.

ಹೊಸದಿಲ್ಲಿ: ಕಳೆದ ಮೇ ತಿಂಗಳಿನಲ್ಲಿ ನಿಧನರಾದ ಖ್ಯಾತ ಖಗೋಳ ಭೌತಶಾಸ್ತ್ರಜ್ಞ ಡಾ.ಜಯಂತ ನಾರಳೀಕರ್ ಅವರನ್ನು ಶನಿವಾರ ದೇಶದ ಅತ್ಯುನ್ನತ ವಿಜ್ಞಾನ ಪ್ರಶಸ್ತಿಯಾದ ವಿಜ್ಞಾನ ರತ್ನ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.

ಬ್ರಹ್ಮಾಂಡವು ಒಂದು ಕ್ಷಣದಲ್ಲಿ ಸೃಷ್ಟಿಯಾಗಿತ್ತು ಎಂದು ಪ್ರತಿ ಪಾದಿಸುವ ಬಿಗ್ ಬ್ಯಾಂಗ್ ಸಿದ್ಧಾಂತವನ್ನು ನಾರಳೀಕರ್ ಪ್ರಶ್ನಿಸಿದ್ದರು. ಮೇ 20ರಂದು ತನ್ನ 86ನೇ ವಯಸ್ಸಿನಲ್ಲಿ ಅವರು ನಿಧನರಾಗಿದ್ದರು.   

ಈ ಬಾರಿ ಎಂಟು ವಿಜ್ಞಾನಿಗಳನ್ನು ‘ವಿಜ್ಞಾನ ಶ್ರೀ ಪ್ರಶಸ್ತಿಗೆ’ ಸರಕಾರ ಆಯ್ಕೆ ಮಾಡಿದೆ. ಜ್ಞಾನೇಂದ್ರ ಪ್ರತಾಪ್‌ ಸಿಂಗ್‌ (ಕೃಷಿ ವಿಜ್ಞಾನ), ಯೂಸುಫ್ ಮುಹಮ್ಮದ್‌ ಶೇಖ್ (ಅಣು ಶಕ್ತಿ), ಕೆ. ತಂಗರಾಜ್ (ಜೈವಿಕ ವಿಜ್ಞಾನ), ಪ್ರದೀಪ್ ತಲಪ್ಪಿಲ್ (ರಸಾಯನ ವಿಜ್ಞಾನ), ಅನಿರುದ್ಧ ಬಾಲಚಂದ್ರ ಪಂಡಿತ್ (ಎಂಜಿನಿಯರಿಂಗ್), ಎಸ್. ವೆಂಕಟ ಮೋಹನ್ (ಪರಿಸರ ವಿಜ್ಞಾನ), ಮಹಾನ್ ಎಂ.ಜೆ. (ಗಣಿತ ಮತ್ತು ಗಣಕ ವಿಜ್ಞಾನ) ಮತ್ತು ಜಯನ್ ಎಂ.(ಬಾಹ್ಯಾಕಾಶ ವಿಜ್ಞಾನ) ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಇದಲ್ಲದೆ 14 ಮಂದಿ ಯುವ ವಿಜ್ಞಾನಿಗಳು ‘ವಿಜ್ಞಾನ ಯುವ ಪ್ರಶಸ್ತಿಗೆ’ ಆಯ್ಕೆಯಾಗಿದ್ದಾರೆ. ಅವರಲ್ಲಿ ಜಗದೀಶ್ ಗುಪ್ತಾ ಕೆ, ಸತ್ಯೇಂದ್ರ ಕುಮಾರ್ ಎಂ, ದೇವಾರ್ಕ್ ಸೇನ್ಗುಪ್ತಾ, ದೀಪಾ ಅಗಾಶೆ, ದಿವ್ಯೇಂದು ದಾಸ್, ವಾಲಿಯರ್ ರಹಮಾನ್, ಅರ್ಕಪ್ರವ ಬಸು, ಸವ್ಯಸಾಚಿ ಮುಖರ್ಜಿ, ಶ್ವೇತಾ ಪ್ರೇಮ್ ಅಗರ್ವಾಲ್, ಸುರೇಶ್ ಕಮಾರ್, ಅಮಿತ್ ಕುಮಾರ್ ಅಗರ್ವಾಲ್, ಸುರ್ಹುದ್ ಶ್ರೀಕಾಂತ್ ಮೋರೆ, ಅಂಕುರ್ ಗರ್ಗ್, ಮೋಹನಶಂಕರ ಶಿವಪ್ರಕಾಶಂ ಸೇರಿದ್ದಾರೆ.

ವಿಜ್ಞಾನ ತಂಡ ಪ್ರಶಸ್ತಿಗೆ ‘ಸಿಎಸ್ಐಆರ್ ಅರೊಮಾ ಮಿಷನ್’ ಆಯ್ಕೆಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News