×
Ad

ನೀರೆಂದು ಭಾವಿಸಿ ಮದ್ಯ ಸೇವಿಸಿದ ಪುಟ್ಟ ಬಾಲಕಿ ಮೃತ್ಯು

Update: 2024-08-01 08:47 IST

ರಾಯಪುರ: ಆಟವಾಡುತ್ತಿದ್ದಾಗ ಬಾಯಾರಿದ ಪುಟ್ಟ ಬಾಲಕಿ ಮನೆಗೆ ಓಡಿಬಂದು ನೀರೆಂದು ಭಾವಿಸಿ ಕಚ್ಚಾ ಮದ್ಯ ಸೇವಿಸಿ ಮೃತಪಟ್ಟಿರುವ ಘಟನೆ ಛತ್ತೀಸ್ ಗಢದ ಬಲರಾಂಪುರದಲ್ಲಿ ನಡೆದಿದೆ.

ಮೂರು ವರ್ಷದ ಬಾಲಕಿ ಸರಿತಾ ಮನೆಯಲ್ಲಿ ಸೋಮವಾರ ಆಟವಾಡುತ್ತಿದ್ದಳು. ಬಾಯಾರಿಕೆಯಿಂದ ತಕ್ಷಣ ಓಡಿ ಬಂದು ಅಜ್ಜಿಯ ಕೊಠಡಿಯ ಮೇಜಿನ ಮೇಲಿದ್ದ ಬಾಟಲಿಯನ್ನು ತೆಗೆದು ನೀರೆಂದು ಭಾವಿಸಿ ಕುಡಿದ್ದಾಳೆ. ಮದ್ಯವನ್ನು ನೇರವಾಗಿ ಕುಡಿದಿದ್ದರಿಂದ ಬಾಲಕಿಯ ಗಂಟಲು ಸುಟ್ಟಿದೆ. ತಕ್ಷಣವೇ ತಾಯಿಯ ಬಳಿಗೆ ಓಡಿ ಬಂದ ಬಾಲಕಿ ಪ್ರಜ್ಞೆ ಕಳೆದುಕೊಂಡು ನೆಲದ ಮೇಲೆ ಬಿದ್ದಳು ಎನ್ನಲಾಗಿದೆ.

ಕೂಡಲೇ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದರೂ, ಮಂಗಳವಾರ ಚಿಕಿತ್ಸೆ ಫಲಕಾರಿಯಾಗದೇ ಆಕೆ ಮೃತಪಟ್ಟಳು ಎಂದು ಪೊಲೀಸರು ಹೇಳಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News