×
Ad

ಲೋಕಸಭಾ ಚುನಾವಣೆ | ಬಿಜೆಪಿಯ 5ನೇ ಪಟ್ಟಿ ಬಿಡುಗಡೆ

Update: 2024-03-24 21:28 IST

ಹೊಸದಿಲ್ಲಿ : ಬಿಜೆಪಿಯು ಲೋಕ ಸಭಾ ಚುನವಣೆಗೆ 5 ನೇ ಪಟ್ಟಿ ಬಿಡುಗಡೆ ಮಾಡಿದ್ದು, 111 ಅಭ್ಯರ್ಥಿಗಳಿಗೆ ಟಿಕೆಟ್ ಘೋಷಿಸಲಾಗಿದೆ ಎಂದು ANI ಸುದ್ದಿ ಸಂಸ್ಥೆ ವರದಿ ಮಾಡಿದೆ.

ಪ್ರಖರ ಹಿಂದುತ್ವವಾದಿ ಕರ್ನಾಟಕದ ಉತ್ತರ ಕನ್ನಡದ ಅನಂತ್ ಕುಮಾರ್ ಹೆಗಡೆಗೆ ಈ ಬಾರಿ ಲೋಕಸಭಾ ಟಿಕೆಟ್ ನಿರಾಕರಿಸಲಾಗಿದೆ. ಅವರ ಬದಲಿಗೆ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಟಿಕೆಟ್ ಘೋಷಿಸಲಾಗಿದೆ.

ಹಿಮಾಚಲ ಪ್ರದೇಶದ ಮಂಡಿಯಿಂದ ಚಿತ್ರನಟಿ ಕಂಗನಾ ರಾಣಾವತ್‌ ಲೋಕಸಭೆಗೆ ಸ್ಫರ್ಧಿಸಲಿದ್ದಾರೆ. ದುಮ್ಕಾದಿಂದ ಸೀತಾ ಸೊರೆನ್, ಬೆಳಗಾವಿಯಿಂದ ಜಗದೀಶ ಶೆಟ್ಟರ್ ಹಾಗೂ ರಾಯಚೂರು ಎಸ್ ಟಿ ಮೀಸಲು ಕ್ಷೇತ್ರದಲ್ಲಿ ರಾಜ ಅಮರೇಶ್ವರ ನಾಯಕ್ ಗೆ ಟಿಕೆಟ್ ನೀಡಲಾಗಿದೆ.

ನಿತ್ಯಾನಂದ ರೈ ಉಜಿಯಾರಪುರದಿಂದ ಸ್ಪರ್ಧಿಸಲಿದ್ದಾರೆ. ಬೇಗುಸರಾಯ್‌ನಿಂದ ಗಿರಿರಾಜ್ ಸಿಂಗ್, ಪಾಟ್ನಾ ಸಾಹಿಬ್‌ನಿಂದ ರವಿಶಂಕರ್ ಪ್ರಸಾದ್,

ಕುರುಕ್ಷೇತ್ರದಿಂದ ನವೀನ್ ಜಿಂದಾಲ್ ಸ್ಪರ್ಧಿಸಲಿದ್ದಾರೆ. ಚಿಕ್ಕಬಳ್ಳಾಪುರದಿಂದ ಕೆ ಸುಧಾಕರ್, ಸಂಬಲ್ಪುರದಿಂದ ಧರ್ಮೇಂದ್ರ ಪ್ರಧಾನ್, ಬಾಲಸೋರ್‌ನಿಂದ ಪ್ರತಾಪ್ ಸಾರಂಗಿ, ಪುರಿಯಿಂದ ಸಂಬಿತ್ ಪಾತ್ರ, ಭುವನೇಶ್ವರದಿಂದ ಅಪರಿಜಿತಾ ಸಾರಂಗಿ, ಮೀರತ್‌ನಿಂದ ಅರುಣ್ ಗೋವಿಲ್ ಸ್ಪರ್ಧಿಸಲಿರುವ ಪ್ರಮುಖರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News