×
Ad

ಪಾದರಕ್ಷೆ ಕಳಚಿ ಐಸಿಯು ಪ್ರವೇಶಿಸುವಂತೆ ಸೂಚಿಸಿದ ಆಸ್ಪತ್ರೆಗೆ ಬುಲ್‌ಡೋಜರ್‌ ಕರೆಸಿದ ಲಕ್ನೋ ಮೇಯರ್‌

Update: 2023-08-23 19:43 IST

ಲಕ್ನೋ: ನಗರದ ಮೇಯರ್‌ ಸುಷ್ಮಾ ಖರಕ್ವಾಲ್‌ ಅವರು ಖಾಸಗಿ ಆಸ್ಪತ್ರೆಯಲ್ಲಿರುವಪಾದರಕ್ಷೆ ಕಳಚಿ ಐಸಿಯು ಪ್ರವೇಶಿಸುವಂತೆ ಸೂಚಿಸಿದ ಆಸ್ಪತ್ರೆಗೆ ಬುಲ್‌ಡೋಜರ್‌ ಕರೆಸಿದ ಲಕ್ನೋ ಮೇಯರ್‌

ರ್‌ ಕೂಡ ಆಗಮಿಸಿತೆನ್ನಲಾಗಿದೆ. ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಲಕ್ನೋದ ಥಾನಾ ಬಿಜ್ನೌರ್‌ ಪ್ರದೇಶದಲ್ಲಿರುವ ಖಾಸಗಿ ಆಸ್ಪತ್ರೆಯಾದ ವಿನಾಯಕ ಮೆಡಿಕೇರ್‌ನ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮುನಿಸಿಪಲ್‌ ಆಡಳಿತದ ಆರ್ಮಿ ಬ್ರಿಗೇಡಿನ ನಿವೃತ್ತ ಸೈನಿಕ ಸುರೇನ್‌ ಕುಮಾರ್‌ ಅವರನ್ನು ಭೇಟಿಯಾಗಲು ಮೇಯರ್‌ ಆಗಮಿಸಿದ್ದರು.

ಮೇಯರ್‌ ಮತ್ತಾಕೆಯ ಸಹೋದ್ಯೋಗಿಗಳು ಪಾದರಕ್ಷೆ ಧರಿಸಿಯೇ ಐಸಿಯು ಪ್ರವೇಶಿಸಲು ಯತ್ನಿಸಿದಾಗ ಅವರನ್ನು ತಡೆಯಲಾಯಿತು ಎಂದು ಆಸ್ಪತ್ರೆ ಆಡಳಿತ ಹೇಳಿದೆ.

ಆದರೆ ಆಸ್ಪತ್ರೆ ಸಿಬ್ಬಂದಿ ಹಾಗೂ ಮೇಯರ್‌ ನಡುವೆ ಜಟಾಪಟಿ ನಡೆದಿದೆಯೆಂಬ ವರದಿಗಳನ್ನು ಆಸ್ಪತ್ರೆಯ ನಿರ್ದೇಶಕಿ ಮುದ್ರಿಕಾ ಸಿಂಗ್‌ ನಿರಾಕರಿಸಿದ್ದಾರೆ. ಮೇಯರ್‌ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ಜೊತೆ ಮಾತನಾಡಿದರು, ಯಾವುದೇ ವ್ಯಾಗ್ಯುದ್ಧ ನಡೆದಿಲ್ಲ ಎಂದು ಆಕೆ ಹೇಳಿದ್ದಾರೆ.

ಈ ಕುರಿತು ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣದಲ್ಲಿ ದಾರಿತಪ್ಪಿಸುವ ಸುದ್ದಿಗಳು ವರದಿಯಾಗುತ್ತಿವೆ, ಇವುಗಳು ಆಧಾರರಹಿತ ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News