ಮಹಾರಾಷ್ಟ್ರ: ಮೀಸಲಾತಿ ಕುರಿತು ಸಭೆ ನಡೆಸಲು ಬಂದಿದ್ದ ಕಂದಾಯ ಸಚಿವರ ಮೇಲೆ ಅರಶಿನ ಪುಡಿ ಎರಚಿದ ಪ್ರತಿಭಟನಾಕಾರ
Photo: Twitter@NDTV
ಮುಂಬೈ: ಮಹಾರಾಷ್ಟ್ರದ ಕಂದಾಯ ಸಚಿವ ರಾಧಾಕೃಷ್ಣ ವಿಖೆ ಪಾಟೀಲ್ ಅವರು ಮೀಸಲಾತಿಗಾಗಿ ಒತ್ತಾಯಿಸಿ ಸಮುದಾಯದ ಸದಸ್ಯರೊಂದಿಗೆ ಇಂದು ಸಭೆ ನಡೆಸುತ್ತಿದ್ದಾಗ ಪ್ರತಿಭಟನಾಕಾರನೊಬ್ಬ ಅವರಿಗೆ ಹಲ್ದಿ ಅಥವಾ ಅರಿಶಿನ ಪುಡಿ ಎರಚಿರುವ ಘಟನೆ ನಡೆದಿದೆ.
ಘಟನೆಯ ವೀಡಿಯೋದಲ್ಲಿ ಧಂಗರ್ (ಕುರುಬ) ಸಮುದಾಯದ ಇಬ್ಬರು ವ್ಯಕ್ತಿಗಳು ಸಚಿವರ ಎರಡೂ ಬದಿಯಲ್ಲಿ ನಿಂತಿದ್ದರು. ಆಗ ಅವರಲ್ಲಿ ಒಬ್ಬಾತ ಇದ್ದಕ್ಕಿದ್ದಂತೆ ತನ್ನ ಜೇಬಿನಿಂದ ಅರಿಶಿನ ಪುಡಿಯನ್ನು ಹೊರತೆಗೆದು ಮಂತ್ರಿಯ ತಲೆ ಮೇಲೆ ಸುರಿದಿದ್ದಾನೆ. ಮರಾಠಿಯಲ್ಲಿ ಮೀಸಲಾತಿ ವಿಚಾರವಾಗಿ ಕೂಗಾಡುತ್ತಿದ್ದ ವ್ಯಕ್ತಿಯನ್ನು ಪಾಟೀಲ್ ಅವರ ಸಹಾಯಕರು ಹಿಡಿದು ನೆಲಕ್ಕೆ ಕೆಡವಿ ಥಳಿಸಿರುವುದು ವೀಡಿಯೊದಲ್ಲಿ ಕಂಡುಬಂದಿದೆ.
ಸೊಲ್ಲಾಪುರ ಜಿಲ್ಲೆಯ ಸರಕಾರಿ ತಂಗುದಾಣದಲ್ಲಿ ಈ ಘಟನೆ ನಡೆದಿದೆ.
ಶೇಖರ್ ಬಂಗಲೆ ಎಂದು ಗುರುತಿಸಲಾದ ವ್ಯಕ್ತಿ ನಂತರ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ತನ್ನ ಸಮುದಾಯವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸರಕಾರದ ಗಮನ ಸೆಳೆಯಲು ಈ ರೀತಿ ಮಾಡಿದ್ದೇನೆ ಎಂದು ಹೇಳಿದರು.
ಧನಗರ್ ಸಮುದಾಯಕ್ಕೆ ಪರಿಶಿಷ್ಟ ಪಂಗಡದ (ಎಸ್ಟಿ) ವರ್ಗದಡಿ ಮೀಸಲಾತಿ ನೀಡಬೇಕೆಂಬ ಬೇಡಿಕೆಯನ್ನು ಪುನರುಚ್ಚರಿಸಿದ ಅವರು, ಬೇಡಿಕೆಯನ್ನು ಶೀಘ್ರವಾಗಿ ಈಡೇರಿಸದಿದ್ದರೆ ಮುಖ್ಯಮಂತ್ರಿ ಅಥವಾ ಇತರ ರಾಜ್ಯ ಸಚಿವರ ಮೇಲೂ ಕಪ್ಪು ಬಣ್ಣ ಎರಚುವುದಾಗಿ ಎಚ್ಚರಿಸಿದರು
Video: Man Throws Haldi At Maharashtra Minister, Warns Chief Minister https://t.co/zQTGSfboXq pic.twitter.com/zrvqRWvQC7
— NDTV (@ndtv) September 8, 2023