×
Ad

ಇಲಿ ಕೊಂದ ಆರೋಪದಲ್ಲಿ ಯುವಕನನ್ನು ಬಂಧಿಸಿದ ಉತ್ತರ ಪ್ರದೇಶ ಪೊಲೀಸರು !

Update: 2023-07-26 17:45 IST

Photo: Twitter/@MuslimSpaces

ಲಕ್ನೋ: ಇಲಿಯ ಮೇಲೆ ಬೈಕ್‌ ಹಾಯಿಸಿ ಕೊಂದ ಆರೋಪದ ಮೇಲೆ ರವಿವಾರ ಪೊಲೀಸರಿಂದ ಬಂಧಿತನಾಗಿದ್ದ ನೊಯ್ದಾದ ಯುವಕನೊಬ್ಬನನ್ನು ಸೋಮವಾರ ಬಿಡುಗಡೆಗೊಳಿಸಲಾಗಿದ್ದು ಈ ಕುರಿತಂತೆ ಇಲಾಖಾ ತನಿಖೆಗೆ ಆದೇಶಿಸಲಾಗಿದೆ ಎಂದು ಗೌತಮ್‌ ಬುದ್ಧ ನಗರ್‌ ಪೊಲೀಸ್‌ ಆಯುಕ್ತೆ ಲಕ್ಷ್ಮಿ ಸಿಂಗ್‌ ಹೇಳಿದ್ದಾರೆ.

ಝೈನುಲ್‌ ಅಬ್ದೀನ್‌ (24) ಎಂಬಾತ ಬೈಕ್‌ ಹಾಯಿಸಿ ಇಲಿಯೊಂದನ್ನು ಕೊಂದಿರುವ ಒಂದು ತಿಂಗಳಷ್ಟು ಹಳೆಯ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ನಂತರ ಇಬ್ಬರು ವ್ಯಕ್ತಿಗಳು ಝೈನುಲ್‌ ನಿವಾಸಕ್ಕೆ ಆಗಮಿಸಿ ಆತನ ಸೋದರನ ಮೇಲೆ ಹಲ್ಲೆ ನಡೆಸಿದ್ದರು.

ಈ ಘಟನೆ ಬೆನ್ನಲ್ಲೇ ಆ ಇಬ್ಬರನ್ನೂ ಬಂಧಿಸಲಾಯಿತು. ನಂತರ ತೊಂದರೆ ಸೃಷ್ಟಿಸಿದ ಆರೋಪದ ಮೇಲೆ ಝೈನುಲ್‌ನನ್ನೂ ಬಂಧಿಸಲಾಗಿತ್ತು.

ಆದರೆ ಸಣ್ಣ ಆಹಾರದ ಸ್ಟಾಲ್‌ ನಡೆಸುತ್ತಿರುವ ಝೈನುಲ್‌ನನ್ನು ಅಲ್ಲಿ ನಡೆದ ಗಲಾಟೆಯೊಂದರ ಸಂಬಂಧ ಬಂಧಿಸಲಾಗಿದೆ ಇಲಿ ಕೊಂದಿದ್ದಕ್ಕೆ ಅಲ್ಲ ಎಂದು ಪೊಲೀಸರು ನಂತರ ಹೇಳಿದ್ದಾರೆ.

ಆದರೆ ಸೋಮವಾರ ಆತನ ಬಂಧನ ಆದೇಶವನ್ನು ವಾಪಸ್‌ ಪಡೆಯಲಾಗಿದ್ದು ಸೆಂಟ್ರಲ್‌ ನೊಯ್ಡಾ ಡಿಸಿಪಿ ಅನಿಲ್‌ ಕುಮಾರ್‌ ಯಾದವ್‌ ನೇತೃತ್ವದಲ್ಲಿ ಇಲಾಖಾ ತನಿಖೆಗೆ ಆದೇಶಿಸಲಾಗಿದೆ ಎಂದು ಪೊಲೀಸ್‌ ಆಯುಕ್ತೆ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News