×
Ad

ಮಣಿಪುರ | ಅಕ್ರಮ ಅಫೀಮು ಬೇಸಾಯ ; 412 ಎಫ್ಐಆರ್, 87 ಮಂದಿ ಬಂಧನ : ಸಿಎಂ ಬಿರೇನ್ ಸಿಂಗ್

Update: 2024-08-08 20:49 IST

ಬಿರೇನ್ ಸಿಂಗ್ | PC : PTI 

ಇಂಫಾಲ : ಮಣಿಪುರ ರಾಜ್ಯದಲ್ಲಿ ಅಕ್ರಮ ಅಫೀಮು ಬೇಸಾಯಕ್ಕೆ ಸಂಬಂಧಿಸಿದಂತೆ ಕಳೆದ 7 ವರ್ಷಗಳಲ್ಲಿ 412 FIR ಗಳನ್ನು ದಾಖಲಿಸಿಕೊಳ್ಳಲಾಗಿದ್ದು, 87 ಮಂದಿಯನ್ನು ಬಂಧಿಸಲಾಗಿದೆ ಎಂದು ಮುಖ್ಯಮಂತ್ರಿ ಬಿರೇನ್ ಸಿಂಗ್ ಗುರುವಾರ ವಿಧಾನಸಭೆಗೆ ತಿಳಿಸಿದರು.

ಕಾಂಗ್ರೆಸ್ ಶಾಸಕ ಲೋಕೇಶ್ವರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, 2017-2024ರ ನಡುವೆ 16,788 ಎಕರೆ ಪ್ರದೇಶಗಳಲ್ಲಿ ಮಾಡಲಾಗಿದ್ದ ಅಫೀಮು ಬೇಸಾಯವನ್ನು ನಾಶ ಮಾಡಲಾಗಿದೆ ಎಂದು ಉತ್ತರಿಸಿದರು.

“2017-2024ರವರೆಗೆ ಅಕ್ರಮ ಅಫೀಮು ಬೇಸಾಯದ ಸಂಬಂಧ 412 FIR ಗಳು ದಾಖಲಾಗಿವೆ. ಜನವರಿ 2017ರಿಂದ ಜುಲೈ 2024ರವರೆಗೆ 16 ಮಂದಿ ಗ್ರಾಮ ಮುಖ್ಯಸ್ಥರು ಸೇರಿದಂತೆ ಒಟ್ಟು 87 ಮಂದಿಯನ್ನು ಬಂಧಿಸಲಾಗಿದೆ” ಎಂದು ಅವರು ಲಿಖಿತ ಉತ್ತರ ನೀಡಿದರು.

ಇದೇ ವೇಳೆ ಕಾರ್ಯಾಚರಣೆ ಅಮಾನತು ಒಪ್ಪಂದದ ಕುರಿತು ಕಾಂಗ್ರೆಸ್ ಶಾಸಕ ಕೆ.ರಂಜಿತ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ವರ್ಷದ ಫೆಬ್ರವರಿ 29ರ ನಂತರ, ಆ ಒಪ್ಪಂದವನ್ನು ವಿಸ್ತರಿಸಲಾಗಿಲ್ಲ ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News