ಮಣಿಪುರ ಮಹಿಳೆಯರ ಬೆತ್ತಲೆ ಮೆರವಣಿಗೆ, ಕೇಂದ್ರವು ಮಧ್ಯ ಪ್ರವೇಶಿಸಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ: ಇರೋಮ್ ಶರ್ಮಿಳಾ
Update: 2023-07-21 23:09 IST
Photo : ಇರೋಮ್ ಶರ್ಮಿಳಾ | PTI
ಚೆನ್ನೈ: ಕೇಂದ್ರ ಸರಕಾರವು ಮಧ್ಯ ಪ್ರವೇಶಿಸಿದ್ದರೆ ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿ ಚಿತ್ರಹಿಂಸೆ ನೀಡಿದ್ದ ಘಟನೆಯು ನಡೆಯುತ್ತಿರಲಿಲ್ಲ ಎಂದು ಸಾಮಾಜಿಕ ಕಾರ್ಯಕರ್ತೆ ಇರೋಮ್ ಶರ್ಮಿಳಾ ಶುಕ್ರವಾರ ಹೇಳಿದರು.
‘ಉಕ್ಕಿನ ಮಹಿಳೆ ’ಎಂದೇ ಖ್ಯಾತರಾಗಿರುವ ಶರ್ಮಿಳಾ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯ ದುರುಪಯೋಗದ ವಿರುದ್ಧ ಪ್ರತಿಭಟಿಸಲು ಸುಮಾರು 16 ವರ್ಷಗಳ ಕಾಲ ಉಪವಾಸ ಸತ್ಯಾಗ್ರಹವನ್ನು ನಡೆಸಿದ್ದರು.
ಮಣಿಪುರದ ಭೀಕರ ಘಟನೆಯ ರೂವಾರಿಗಳಿಗೆ ಪೆರೋಲ್ ರಹಿತ ಜೀವಾವಧಿ ಶಿಕ್ಷೆಯನ್ನು ವಿಧಿಸಬೇಕು ಎಂದು ಸುದ್ದಿಸಂಸ್ಥೆಗೆ ತಿಳಿಸಿದ ಶರ್ಮಿಳಾ,ಮಣಿಪುರದಲ್ಲಿ ಇಂದು ನಡೆಯುತ್ತಿರುವುದು ತನಗೆ ದುಃಖ ಮತ್ತು ವಿಷಾದವನ್ನುಂಟು ಮಾಡಿದೆ ಎಂದರು.