ಅಹಮದಾಬಾದ್: ಬೆಂಕಿ ಬಿದ್ದ ಕಟ್ಟಡದಿಂದ ಸಾಹಸಮಯವಾಗಿ ಮಕ್ಕಳನ್ನು ರಕ್ಷಿಸಿದ ಮಹಿಳೆ!
Update: 2025-04-12 14:55 IST
Screengrab:X/@sanskar_sojitra
ಅಹಮದಾಬಾದ್: ಗುಜರಾತ್‌ನ ಅಹಮದಾಬಾದ್‌ನ ಖೋಖ್ರಾ ಪ್ರದೇಶದ ಪರಿಷ್ಕರ್ 1 ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿ ಅವಘಡ ಸಂಭವಿಸಿದ ಕಟ್ಟಡದಿಂದ ತನ್ನಿಬ್ಬರು ಮಕ್ಕಳನ್ನು ರಕ್ಷಿಸಿದ ಮಹಿಳೆಯೊಬ್ಬರ ವಿಡಿಯೋ ವೈರಲ್ ಆಗಿದೆ.
ವೈರಲ್ ವೀಡಿಯೊದಲ್ಲಿ, ಪರಿಷ್ಕರ್ 1 ಅಪಾರ್ಟ್‌ಮೆಂಟ್‌ನ ಮೂರನೇ ಮಹಡಿಯಿಂದ ದಟ್ಟವಾದ ಹೊಗೆ ಹೊರಬರುತ್ತಿರುವಂತೆಯೇ, ಮಹಿಳೆಯೊಬ್ಬರು ತನ್ನಿಬ್ಬರು ಮಕ್ಕಳನ್ನು ಸಾಹಸಮಯವಾಗಿ ರಕ್ಷಿಸಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ತಾನಿದ್ದ ಮಹಡಿಯಲ್ಲಿ ನಿಂತು, ಸಹಾಯ ಮಾಡಲು ಧಾವಿಸಿದ ಕೆಳಗಿನ ಮಹಡಿಯಲ್ಲಿ ನೆರೆದಿದ್ದ ನಿವಾಸಿಗಳಿಗೆ ತನ್ನ ಮಕ್ಕಳನ್ನು ಎಚ್ಚರಿಕೆಯಿಂದ ನೀಡಿದ ಮಹಿಳೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ..