×
Ad

ಮುಂಬೈ : ರೈಲು ಹರಿದು ಅಂಧ ಮಹಿಳೆ ಮೃತ್ಯು

Update: 2023-10-19 17:43 IST

PHOTO : PTI

ಮುಂಬೈ: ಅಂಧ ಭಿಕ್ಷುಕ ಮಹಿಳೆಯೊಬ್ಬಳು ಉಪನಗರ ರೈಲಿನ ಬೋಗಿಗಳ ನಡುವಿನ ಸಂದಿಯಿಂದ ಕೆಳಕ್ಕೆ ಬಿದ್ದು, ಆಕೆಯ ಮೇಲೆ ರೈಲು ಹರಿದ ಪರಿಣಾಮ ಮೃತಪಟ್ಟಿರುವ ಘಟನೆ ಮುಂಬೈನ ಸೆವ್ರೀ ರೈಲು ನಿಲ್ದಾಣದಲ್ಲಿ ನಡೆದಿದೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.

ಈ ಘಟನೆಯು ಬುಧವಾರ ಸಂಜೆ ಸುಮಾರು 4.30 ಗಂಟೆಗೆ ಸಂಭವಿಸಿದ್ದು, ಮೃತ ಮಹಿಳೆಯು ತನ್ನ ಪತಿಯೊಂದಿಗೆ ಸಿಎಸ್ಎಂಟಿಗೆ ತೆರಳುತ್ತಿದ್ದ ಉಪನಗರ ರೈಲಿನಿಂದ ಕೇಂದ್ರೀಯ ರೈಲ್ವೆಯ ಹಾರ್ಬರ್ ಲೈನ್ ಕಾರಿಡಾರ್ ನಲ್ಲಿನ ಸೆವ್ರೀ ರೈಲ್ವೆ ನಿಲ್ದಾಣದಲ್ಲಿ ಇಳಿದಾಗ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪತಿ-ಪತ್ನಿ ಇಬ್ಬರೂ ಅಂಧರು ಎಂದು ಹೇಳಲಾಗಿದೆ.

ಪತಿ-ಪತ್ನಿಯರಿಬ್ಬರೂ ಅವಸರದಲ್ಲಿ ಬೋಗಿಗಳನ್ನು ಬದಲಾಯಿಸುವಾಗ, ಪತ್ನಿಯು ಬೋಗಿಗಳ ನಡುವಿನ ಸಂದಿಯಲ್ಲಿ ಕೆಳಕ್ಕೆ ಬಿದ್ದಿದ್ದಾರೆ. ಆಕೆಗೆ ಯಾರಾದರೂ ಸಹಾಯ ಮಾಡುವ ಮುನ್ನವೇ, ನಿಲ್ದಾಣ ತೊರೆಯಲು ಆರಂಭಿಸಿರುವ ರೈಲು, ಆಕೆಯ ಮೇಲೆ ಹರಿದುಕೊಂಡು ಹೋಗಿದೆ ಎಂದು ಅವರು ಹೇಳಿದ್ದಾರೆ.

ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಆಕೆಯನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳುವ ಮುನ್ನವೇ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದರು ಎಂದು ಅವರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News