×
Ad

ಮಹಾರಾಷ್ಟ್ರದ ನಾಂದೇಡ್ ಆಸ್ಪತ್ರೆಯಲ್ಲಿ 8 ದಿನಗಳಲ್ಲಿ 108 ರೋಗಿಗಳು ಮೃತ್ಯು

Update: 2023-10-11 12:36 IST

ಮಹಾರಾಷ್ಟ್ರದ ನಂದೇಡ್‌ ಸರ್ಕಾರಿ ಆಸ್ಪತ್ರೆ (PTI)

ಹೊಸದಿಲ್ಲಿ: ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಸೆಪ್ಟೆಂಬರ್‌ ಕೊನೆಯ ವಾರ ಹಾಗೂ ಅಕ್ಟೋಬರ್‌ ಆರಂಭದಲ್ಲಿ 48 ಗಂಟೆಗಳ ಅವಧಿಯಲ್ಲಿ 31 ರೋಗಿಗಳು ಮೃತಪಟ್ಟಿದ್ದರೆ, ಕಳೆದ ಎಂಟು ದಿನಗಳಲ್ಲಿ ಇನ್ನೂ 108 ರೋಗಿಗಳು ಮೃತಪಟ್ಟಿದ್ದಾರೆ. ಲಭ್ಯ ಮಾಹಿತಿಗಳ ಪ್ರಕಾರ ಕಳೆದ 24 ಗಂಟೆಗಳಲ್ಲಿ ಒಂದು ಶಿಶು ಸೇರಿದಂತೆ 11 ರೋಗಿಗಳು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಆಸ್ಪತ್ರೆಯಲ್ಲಿನ ಸಾವುಗಳ ಬಗ್ಗೆ ಪ್ರತಿಕ್ರಿಯಿಸಿದ ಡಾ. ಶಂಕರ್‌ರಾವ್‌ ಚವಾಣ್‌ ಸರಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಡೀನ್‌ ಡಾ ಶ್ಯಾಮ್‌ ವಾಕೊಡೆ, ಆಸ್ಪತ್ರೆಯಲ್ಲಿ ಔಷಧಿಗಳ ಕೊರತೆಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕಳೆದ 24 ಗಂಟೆಗಳಲ್ಲಿ ಇಲ್ಲಿನ ವೈದ್ಯರು 1,100ಕ್ಕೂ ಅಧಿಕ ರೋಗಿಗಳ ಆರೋಗ್ಯ ತಪಾಸಣೆ ನಡೆಸಿ 191 ಹೊಸ ರೋಗಿಗಳನ್ನು ದಾಖಲಿಸಿಕೊಂಡಿದಾರೆ ಎಂದು ಅವರು ಹೇಳಿದರು.

“ಹಿಂದೆ ಆಸ್ಪತ್ರೆಯಲ್ಲಿ 24 ಗಂಟೆ ಅವಧಿಯಲ್ಲಿ ಸರಾಸರಿ ಮರಣ ಪ್ರಮಾಣ 13 ಆಗಿತ್ತು. ಈಗ ಅದು 11ಕ್ಕೆ ಇಳಿದಿದೆ,” ಎಂದು ಅವರು ಹೇಳಿದ್ದಾರೆ. ಜನನ ವೇಳೆ ಹಲವು ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದ ಶಿಶುಗಳು ಸಾವಿಗೀಡಾದವರಲ್ಲಿ ಸೇರಿದ್ದಾರೆ.

“ಸಾಕಷ್ಟು ಔಷಧಿ ದಾಸ್ತಾನು ಇದೆ ಮೂರು ತಿಂಗಳಿಗಾಗುವಷ್ಟು ಇದೆ, ಔಷಧಿ ಕೊರತೆಯಿಂದ ಯಾವುದೇ ರೋಗಿ ಸಾವನ್ನಪ್ಪಿಲ್ಲ, ಆರೋಗ್ಯ ಹದಗೆಟ್ಟು ಸಾವನ್ನಪ್ಪಿದ್ದಾರೆ. ಸಿಬ್ಬಂದಿ ಎಲ್ಲಾ ರೋಗಿಗಳಿಗೂ ಸಹಾಯ ಮಾಡುತ್ತಿದ್ದಾರೆ,” ಎಂದು ಅವರು ಹೇಳಿದರು.

ವಾರ್ತಾಭಾರತಿ ಓದುಗರಿಗೆ ಶುಭಸುದ್ದಿ: ನಿಮ್ಮ ನೆಚ್ಚಿನ VB ಈಗ ವಾಟ್ಸ್ ಆ್ಯಪ್ ಚಾನೆಲ್ ನಲ್ಲೂ ಲಭ್ಯ

https://bit.ly/3tfd2Ro ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News