×
Ad

ನವಿಮುಂಬೈ: ಶಾಲೆಯ ವಾಶ್ ರೂಮ್ ನಲ್ಲಿ ವಿದ್ಯಾರ್ಥಿನಿ ಶವವಾಗಿ ಪತ್ತೆ

Update: 2023-07-16 15:30 IST

ನವಿಮುಂಬೈ: ನವಿ ಮುಂಬೈನ ವಾಶಿಯ ಶಾಲೆಯೊಂದರ ವಾಶ್ ರೂಂನಲ್ಲಿ ಶನಿವಾರ ಬೆಳಗ್ಗೆ 11 ವರ್ಷದ ವಿದ್ಯಾರ್ಥಿನಿಯೊಬ್ಬಳು ಶವವಾಗಿ ಪತ್ತೆಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೋಪರ್ ಖೈರಾನೆ ಮೂಲದ ಮುಗ್ದಾ ಕದಮ್ ಪ್ರಜ್ಞಾಹೀನಳಾಗಿ, ಸೇಂಟ್ ಮೇರಿಸ್  ಪ್ರೌಢಶಾಲೆ ಹಾಗೂ ಜೂನಿಯರ್ ಕಾಲೇಜಿನ ವಾಶ್ ರೂಂ ನ ನೆಲದ ಮೇಲೆ ಬಿದ್ದು, ಗಾಯಗೊಂಡು ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಳಿಗ್ಗೆ 10.30 ರ ಸುಮಾರಿಗೆ, ವಿರಾಮದ ಸಮಯದಲ್ಲಿ, ವಿದ್ಯಾರ್ಥಿನಿ ಮೂರನೇ ಮಹಡಿಯಲ್ಲಿರುವ ವಾಶ್ ರೂಂಗೆ ಹೋಗಿದ್ದಳು ವಿರಾಮದ ನಂತರ ವಿದ್ಯಾರ್ಥಿನಿ ಹಿಂತಿರುಗದಿದ್ದಾಗ, ಆಕೆಯ ಸಹಪಾಠಿಗಳು ಶಿಕ್ಷಕರಿಗೆ ಮಾಹಿತಿ ನೀಡಿದರು, ಅವರು ಹುಡುಗಿಯನ್ನು ಹುಡುಕಲು ಪ್ರಾರಂಭಿಸಿದರು. ಈ ಮಧ್ಯೆ, ಹೌಸ್ ಕೀಪಿಂಗ್ ಸಿಬ್ಬಂದಿ ವಾಶ್ ರೂಂಗೆ ಹೋಗಿ ನೋಡಿದಾಗ, ಒಂದು ಬಾಗಿಲು ಸ್ವಲ್ಪ ಸಮಯದಿಂದ ಲಾಕ್ ಆಗಿರುವುದು ಕಂಡುಬಂದಿದೆ.. ಯಾವುದೇ ಪ್ರತಿಕ್ರಿಯೆ ಬಾರದೆ ಇದ್ದಾಗ ಬಾಗಿಲು ಬಡಿದು ಒಡೆದು ನೋಡಿದಾಗ ಕದಂ ನೆಲದ ಮೇಲೆ ಬಿದ್ದಿರುವುದು ಕಂಡು ಬಂತು. ವಿದ್ಯಾರ್ಥಿನಿಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು , ಅಲ್ಲಿ ವೈದ್ಯರು ಸಾವನ್ನು ದೃಢಪಡಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News