×
Ad

ಮೋದಿ ಸರ್ಕಾರದ ಅವಧಿಯಲ್ಲಿ ನಕ್ಸಲ್ ಚಟುವಟಿಕೆ ಶೇಕಡ 50ರಷ್ಟು ಇಳಿಕೆ: ಅಮಿತ್ ಶಾ

Update: 2024-02-24 07:44 IST

Photo: PTI

ಹೊಸದಿಲ್ಲಿ: ಮೋದಿ ಆಡಳಿತದ ಅವಧಿಯಲ್ಲಿ ದೇಶದಲ್ಲಿ ನಕ್ಸಲ್ ಚಟುವಟಿಕೆ ಶೇಕಡ 50ರಷ್ಟು ಇಳಿಕೆಯಾಗಿದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಹೇಳಿದ್ದಾರೆ.

ನಕ್ಸಲ್ ಚಟುವಟಿಕೆಯಿಂದ ಆಗಿರುವ ಸಾವಿನ ಸಂಖ್ಯೆಯಲ್ಲಿ ಶೇಕಡ 69ರಷ್ಟು ಇಳಿಕೆಯಾಗಿದ್ದು, ನಕ್ಸಲೀಯರ ದಾಳಿ ವಿರುದ್ಧದ ಸಮಗ್ರ ದೃಷ್ಟಿಕೋನ ಹಾಗೂ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಅಭಿವೃದ್ಧಿಗೆ ಒತ್ತು ನೀಡಿರುವುದು ಇದಕ್ಕೆ ಕಾರಣ ಎಂದು ಅವರು ವಿಶ್ಲೇಷಿಸಿದ್ದಾರೆ.

ನಕ್ಸಲೀಯತೆ ಕೊನೆಯುಸಿರೆಳೆಯುತ್ತಿದೆ ಎಂದು ಎಕ್ಸ್ನಲ್ಲಿ ಸರಣಿ ಪೋಸ್ಟ್ ಮಾಡಿರುವ ಅವರು, ಇದು ಭದ್ರತಾ ಪಡೆಗಳು ನಡೆಸಿದ ಪ್ರಹಾರದ ಪರಿಣಾಮ ಎಂದು ಹೇಳಿದ್ದಾರೆ.

ರಾಜ್ಯ ಹಾಗೂ ಕೇಂದ್ರೀಯ ಪಡೆಗಳ ಕೇಂದ್ರಿತ ಮತ್ತು ಸಮನ್ವಯ ಕ್ರಮ, ಗುಪ್ತಚರ ವ್ಯವಸ್ಥೆ ಬಲಗೊಂಡಿರುವುದು, ನಕ್ಸಲೀಯರಿಗೆ ನೀಡುವ ನೆರವನ್ನು ತಡೆದಿರುವುದು, ನಕ್ಸಲೀಯತೆಯ ಬಗ್ಗೆ ಅನುಕಂಪ ಇರುವವರನ್ನು ನಿಭಾಯಿಸಿರುವುದು ಮತ್ತು ನಕ್ಸಲ್ ಸಂಬಂಧಿತ ಪ್ರಕರಣಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿರುವುದು ಈ ಕಾರ್ಯತಂತ್ರದ ಅಂಶಗಳು ಎಂದು ಬಣ್ಣಿಸಿದ್ದಾರೆ,

"ಸೂಕ್ತ ಅರೋಗ್ಯ ಹಾಗೂ ಶಿಕ್ಷಣದ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಮೂಲಕ ಮೋದಿ ಸರ್ಕಾರ ನಕ್ಸಲ್ ಪೀಡಿತ ಪ್ರದೇಶಗಳ ಬಡವರ ಹೃದಯಗಳನ್ನು ಗೆದ್ದಿದೆ. ನಕ್ಸಲೀಯತೆಯ ವಿರುದ್ಧದ ಮೋದಿ ಸರ್ಕಾರದ ದೂರದೃಷ್ಟಿಯ ಯೋಜನೆಗೆ ಧ್ಯವಾದಗಳು. ಇವುಗಳನ್ನು ರಾಜ್ಯ ಸರ್ಕಾರಗಳ ಸಹಕಾರದಿಂದ ಜಾರಿಗೊಳಿಸಲಾಗಿದ್ದು, ಸ್ಥಳೀಯ ಜನತೆಯ ವಿಶ್ವಾಸ ಗೆದ್ದಿವೆ. ಎಡಪಂಥೀಯ ನಕ್ಸಲೀಯತೆ ಉತ್ಪತ್ತಿಯ ತಾಣಗಳನ್ನು ಕಳೆದುಕೊಂಡಿದೆ" ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News