ಲೋಕಸಭಾ ಚುನಾವಣೆ 2024 | INDIA ಒಕ್ಕೂಟ ಸೇರಿದರೆ ನಿತೀಶ್ ಗೆ ಉಪಪ್ರಧಾನಿ ಪಟ್ಟ ಆಫರ್?
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದ, ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ರಿಗೆ ಭಾರಿ ಹಿನ್ನಡೆ. ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ 291139 ಮತಗಳನ್ನು ಗಳಿಸಿದರೆ, ಡಿ.ಕೆ.ಸುರೇಶ್ 204595 ಮತಗಳನ್ನು ಗಳಿಸಿದ್ದಾರೆ.
ಮಹಾರಾಷ್ಟ್ರಲ್ಲಿ INDIA ಗೆ ಭಾರೀ ಮುನ್ನಡೆ
ವಯನಾಡ್ ನಲ್ಲಿ ರಾಹುಲ್ ಗಾಂಧಿಗೆ ಒಂದು ಲಕ್ಷ ಮತಗಳ ಮುನ್ನಡೆ
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ: ಹಾಲಿ ಸಂಸದ, ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ರಿಗೆ ಭಾರೀ ಹಿನ್ನಡೆ
ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ 291139 ಮತಗಳನ್ನು ಗಳಿಸಿದರೆ, ಡಿ.ಕೆ.ಸುರೇಶ್ 204595 ಮತಗಳನ್ನು ಗಳಿಸಿದ್ದಾರೆ.
ಡಾ.ಸಿ.ಎನ್.ಮಂಜುನಾಥ್ 86544 ಮತಗಳ ಮುನ್ನಡೆ ಸಾಧಿಸಿದ್ದಾರೆ.
ದ.ಕ. ಲೋಕಸಭಾ ಕ್ಷೇತ್ರ | 50 ಸಾವಿರ ದಾಟಿದ ಕ್ಯಾ.ಬ್ರಿಜೇಶ್ ಚೌಟರ ಮುನ್ನಡೆ
ಬ್ರಿಜೇಶ್ ಚೌಟ - 242383 ಮತಗಳನ್ನು ಗಳಿಸಿದರೆ, ಕಾಂಗ್ರೆಸ್ ಅಭ್ಯರ್ಥಿ ಆರ್. ಪದ್ಮರಾಜ್ - 191930 ಮತಗಳನ್ನು ಗಳಿಸಿದ್ದಾರೆ. ಚೌ ಟ 50453 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಇಲ್ಲಿ 7780 ನೋಟಾ ಚಲಾವಣೆಯಾಗಿದೆ.
ನಾಗಪುರದಲ್ಲಿ ನಿತಿನ್ ಗಡ್ಕರಿಗೆ ಮುನ್ನಡೆ
ತಿರುವನಂತಪುರಂನಲ್ಲಿ ಬಿಜೆಪಿಯ ರಾಜೀವ್ ಚಂದ್ರಶೇಖರ್ ಗೆ ಕಾಂಗ್ರೆಸ್ ನ ಶಶಿ ತರೂರ್ ವಿರುದ್ಧ ಮುನ್ನಡೆ
ಕೇರಳ | ವಡಗರದಲ್ಲಿ ಶಾಫೀ ಪರಂಬಿಲ್‌ಗೆ ಮುನ್ನಡೆ
ತಿರುವಳ್ಳೂರಿನಲ್ಲಿ ಸಸಿಕಾಂತ್ ಸೆಂಥಿಲ್ 7,018 ಮತಗಳಿಂದ ಮುನ್ನಡೆ