ಲೋಕಸಭಾ ಚುನಾವಣೆ 2024 | INDIA ಒಕ್ಕೂಟ ಸೇರಿದರೆ ನಿತೀಶ್ ಗೆ ಉಪಪ್ರಧಾನಿ ಪಟ್ಟ ಆಫರ್?
ಕಾಸರಗೋಡು ಲೋಕಸಭಾ ಕ್ಷೇತ್ರ: ಕಾಂಗ್ರೆಸ್ ಗೆ 11,000 ಮತಗಳ ಮುನ್ನಡೆ
ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ 11,000 ಮತಗಳ ಮುನ್ನಡೆ ಸಾಧಿಸಿದೆ.
ಕಾಂಗ್ರೆಸ್ ಅಭ್ಯರ್ಥಿ ರಾಜ್ ಮೋಹನ್ ಉಣ್ಣಿತ್ತಾನ್ 53,535 ಮತಗಳನ್ನು ಗಳಿಸಿದ್ದಾರೆ. ಸಿಪಿಎಂ ಅಭ್ಯರ್ಥಿ ಎಂ.ವಿ.ಬಾಲಕೃಷ್ಣನ್ ಮಾಸ್ಟರ್ 42,535 ಮತಗಳನ್ನು ಗಳಿಸಿದ್ದಾರೆ. ಮತ ಎಣಿಕೆ ಮುಂದುವರಿದಿದೆ.
ಗುಲ್ಬರ್ಗಾ ಲೋಕಸಭೆ ಕ್ಷೇತ್ರ | 6ನೇ ಸುತ್ತಿನ ಮತ ಎಣಿಕೆ ಪೂರ್ಣ: ಬಿಜೆಪಿಗೆ ಮುನ್ನಡೆ
ಬಿಜೆಪಿ ಅಭ್ಯರ್ಥಿ ಡಾ.ಉಮೇಶ್ ಜಾಧವ್ -23963 ಮತಗಳು
ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ: 20707 ಮತಗಳು
ಡಾ.ಉಮೇಶ್ ಜಾಧವ್ ರಿಗೆ 4300 ಮತಗಳ ಮುನ್ನಡೆ
ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಭಾರೀ ಹಿನ್ನಡೆ. ಪುಟಿದೆದ್ದ INDIA ಒಕ್ಕೂಟ.
ತುಮಕೂರು ಲೋಕಸಭಾ ಕ್ಷೇತ್ರ | 7ನೇ ಸುತ್ತಿನ ಎಣಿಕೆ ಮುಕ್ತಾಯ: ಬಿಜೆಪಿಗೆ ಮುನ್ನಡೆ
ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ 174938 ಮತಗಳನ್ನು ಗಳಿಸಿದರೆ, ಕಾಂಗ್ರೆಸ್ ಅಭ್ಯರ್ಥಿ ಎಸ್. ಪಿ. ಮುದ್ದಹನುಮೇ ಗೌಡ135213 ಮತಗಳನ್ನು ಗಳಿಸಿದ್ದಾರೆ. ಸೋಮಣ್ಣ 39725 ಮತಗಳ ಮುನ್ನಡೆ ಸಾಧಿಸಿದ್ದಾರೆ.
360 ಕ್ಷೇತ್ರಗಳಲ್ಲಿ INDIA ಮತ್ತು NDA ನಡುವೆ ಭಾರೀ ಪೈಪೋಟಿ
ಅಮೇಥಿಯಲ್ಲಿ ಬಿಜೆಪಿಯ ಸ್ಮೃತಿ ಇರಾನಿಗೆ 14 ಸಾವಿರ ಮತಗಳ ಹಿನ್ನಡೆ
ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರ | ಕಾಂಗ್ರೆಸ್ ಅಭ್ಯರ್ಥಿಗೆ 42584 ಮತಗಳ ಮುನ್ನಡೆ
ಕಾಂಗ್ರೇಸ್ ಅಭ್ಯರ್ಥಿ ಸುನೀಲ್ ಬೋಸ್- 213180 ಮತಗಳು
ಬಿಜೆಪಿ ಅಭ್ಯರ್ಥಿ ಎಸ್ ಬಾಲರಾಜ್ - 170596 ಮತಗಳು
ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 3ನೇ ಸುತ್ತಿನ ಮತ ಎಣಿಕೆ ಮುಕ್ತಾಯಕ್ಕೆ ಬಿಜೆಪಿ ಮುನ್ನಡೆ 63094 ಮತಗಳಿಗೆ ಏರಿಕೆ
ಬಿಜೆಪಿ- ಕೋಟ ಶ್ರೀನಿವಾಸ ಪೂಜಾರಿ: 158618 ಮತ
ಕಾಂಗ್ರೆಸ್ - ಜಯಪ್ರಕಾಶ್ ಹೆಗ್ಡೆ: 95524 ಮತ
ದ.ಕ. ಲೋಕಸಭಾ ಕ್ಷೇತ್ರ | ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟರಿಗೆ 22584 ಮತಗಳ ಮುನ್ನಡೆ
ಕೊಪ್ಪಳ: ಕಾಂಗ್ರೆಸ್ ಅಭ್ಯರ್ಥಿಗೆ ಮುನ್ನಡೆ