ಲೋಕಸಭಾ ಚುನಾವಣೆ 2024 | INDIA ಒಕ್ಕೂಟ ಸೇರಿದರೆ ನಿತೀಶ್ ಗೆ ಉಪಪ್ರಧಾನಿ ಪಟ್ಟ ಆಫರ್?
ಹಿಮಾಚಲಪ್ರದೇಶದ ಮಂಡಿ ಕ್ಷೇತ್ರದಲ್ಲಿ ಕಂಗನಾ ರಣಾವತ್ ಗೆ ಹಿನ್ನಡೆ
NDA 14, INDIA 6 ಕ್ಷೇತ್ರಗಳಲ್ಲಿ ಮುನ್ನಡೆ
ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗುತ್ತಿದ್ದಂತೆ NDA - 8, INDIA – 3 ಕ್ಷೇತ್ರಗಳಲ್ಲಿ ಆರಂಭಿಕ ಮುನ್ನಡೆಯಲ್ಲಿದೆ
ಇಂದು(ಮಂಗಳವಾರ) ನಡೆಯಲಿದ್ದು, ಭಾರತದ ಭವಿಷ್ಯ ನಿರ್ಧರಿಸಲಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದರೆ, ವಿಪಕ್ಷಗಳ ಒಕ್ಕೂಟ ʼಇಂಡಿಯಾʼವು ಅಚ್ಚರಿಯ ಫಲಿತಾಂಶ ನೀಡಲು ಕಾತರವಾಗಿದೆ.
543 ಕ್ಷೇತ್ರಗಳಲ್ಲಿ ಗುಜರಾತ್‌ನ ಸೂರತ್ ಹೊರತುಪಡಿಸಿ ಚುನಾವಣೆ ಎದುರಿಸಿದ 8360 ಅಭ್ಯರ್ಥಿಗಳಲ್ಲಿ ಸಂಸತ್ ಪ್ರವೇಶಿಸುವ ಅಭ್ಯರ್ಥಿಗಳ ಚಿತ್ರಣ ಮಂಗಳವಾರ ಸಂಜೆಯ ವೇಳೆಗೆ ಹೊರಬರಲಿದೆ. ಸೂರತ್‌ನಲ್ಲಿ ಅಭ್ಯರ್ಥಿ ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ದಾವಣಗೆರೆಯಲ್ಲಿ ತೆರೆದ ಸ್ಟ್ರಾಂಗ್ ರೂಂ. ಅಂಚೆ ಮತ ಎಣಿಕೆ ಪ್ರಾರಂಭ.
ಜನಾದೇಶವನ್ನು ಒಪ್ಪಿಕೊಳ್ಳಲಿದ್ದೇವೆ : ಕಾಂಗ್ರೆಸ್ ನಾಯಕ ಮನೀಶ್ ತಿವಾರಿ
ಇಂದು ಲೋಕಸಭೆ ಚುನಾವಣೆ ಘೋಷಣೆಯಾಗಲಿದ್ದು, ಜನಾದೇಶವನ್ನು ತಮ್ಮ ಪಕ್ಷ ಒಪ್ಪಿಕೊಳ್ಳಲಿದೆ ಎಂದು ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಹೇಳಿದ್ದಾರೆ
ಬೆಂಗಳೂರು ಕೇಂದ್ರ: ಚುನಾವಣೆ ಎಣಿಕಾ ಕೇಂದ್ರದಲ್ಲಿ ಸ್ಟ್ರಾಂಗ್ ರೂಂ ತೆರೆಯಲಾಯಿತು
ಬೆಂಗಳೂರು ಕೇಂದ್ರದ ಚುನಾವಣೆ ಎಣಿಕಾ ಕೇಂದ್ರದಲ್ಲಿ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಸ್ಟ್ರಾಂಗ್ ರೂಂ ತೆರೆಯಲಾಯಿತು.
ಇಂದು ಪ್ರಮುಖ ಬಿಜೆಪಿ ಸಭೆ
ಇಂದು ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಲಿದ್ದು, ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ನೇತೃತ್ವದಲ್ಲಿ ಪಕ್ಷದ ಮಹತ್ವದ ಸಭೆ ನಡೆಯಲಿದೆ.
ಮೈಸೂರು- ಕೊಡಗು ಲೋಕಸಭಾ ಕ್ಷೇತ್ರ: ಮತ ಎಣಿಕೆಗೆ ಕ್ಷಣಗಣನೆ ಆರಂಭ
ಮೈಸೂರು ಮಹಾರಾಣಿ ಮಹಿಳಾ ವಾಣಿಜ್ಯ ಕಾಲೇಜಿನಲ್ಲಿ ಮತ ಎಣಿಕೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಕಾಂಗ್ರೆಸ್ ನ ಎಂ.ಲಕ್ಷ್ಮಣ್ ಮತ್ತು ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಯದುವೀರ್ ಒಡೆಯರ್ ನಡುವೆ ನೇರ ಸ್ಪರ್ಧೆ ಇದೆ. ಇವರಲ್ಲದೆ ಇನ್ನೂ 16 ಮಂದಿ ಕಣದಲ್ಲಿದ್ದಾರೆ.