ನೇಪಾಳ | ಹಣಕಾಸು ಸಚಿವರನ್ನು ಅಟ್ಟಾಡಿಸಿ ಹೊಡೆದ ಪ್ರತಿಭಟನಾಕಾರರು
Update: 2025-09-09 21:12 IST
PC : PTI
ಕಠ್ಮಂಡು: ನೇಪಾಳದ ಯುವ ಪ್ರತಿಭಟನಾಕಾರರು ಮಂಗಳವಾರ ಅಧ್ಯಕ್ಷ ರಾಮಚಂದ್ರ ಪೌದೆಲ್ ಮತ್ತು ಪ್ರಧಾನಿ ಕೆ.ಪಿ. ಶರ್ಮಾ ಒಲಿ ಅವರ ಖಾಸಗಿ ನಿವಾಸಗಳಲ್ಲಿ ದಾಂಧಲೆಗೈದರು ಹಾಗೂ ಹಣಕಾಸು ಸಚಿವ ಬಿಷ್ಣು ಪ್ರಸಾದ್ ಪೌದೆಲ್‌ರನ್ನು ರಸ್ತೆಯಲ್ಲಿ ಅಟ್ಟಾಡಿಸಿದರು.
ಹಣಕಾಸು ಸಚಿವರನ್ನು ಪ್ರತಿಭಟನಾಕಾರರು ರಸ್ತೆಯಲ್ಲಿ ಬೆನ್ನಟ್ಟಿ ಹೊಡೆಯುವುದನ್ನು ತೋರಿಸುವ ವೀಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದೆ.
ಇಪ್ಪತ್ತಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದ ಜನರು ಪೌದೆಲ್‌ರನ್ನು ಅಟ್ಟಿಸಿಕೊಂಡು ಹೋಗುವುದು ಮತ್ತು ಅವರು ಪ್ರಾಣ ಭಯದಿಂದ ಓಡುತ್ತಿರುವುದು ವೀಡಿಯೊದಲ್ಲಿ ಕಾಣುತ್ತದೆ. ಒಬ್ಬ ವ್ಯಕ್ತಿ ಅವರಿಗೆ ತುಳಿಯುವುದು ಮತ್ತು ಇತರರು ಹೊಡೆಯುವುದು ಕಾಣುತ್ತದೆ.