×
Ad

ಆಪರೇಷನ್‌ ಅಜಯ್: ಇಸ್ರೇಲ್ ನಿಂದ ಭಾರತ ಪ್ರಜೆಗಳ ಎರಡನೇ ತಂಡ ಆಗಮನ

Update: 2023-10-14 21:50 IST

(Image: @DrSJaishankar/X)

ಹೊಸದಿಲ್ಲಿ: . ‘ಆಪರೇಷನ್‌ ಅಜಯ್’ ಕಾರ್ಯಾಚರಣೆಯಡಿ ಸಂಘರ್ಷಪೀಡಿತ ಇಸ್ರೇಲ್ ನಿಂದ ಇಬ್ಬರು ಶಿಶುಗಳು ಸೇರಿದಂತೆ 235 ಮಂದಿ ಭಾರತೀಯ ಪ್ರಜೆಗಳನ್ನು ಶನಿವಾರ ಸುರಕ್ಷಿತವಾಗಿ ಹೊಸದಿಲ್ಲಿಗೆ ವಿಶೇಷ ವಿಮಾನದಲ್ಲಿ ಕರೆ ತರಲಾಗಿದೆ. ಫೆಲೆಸ್ತೀನ್ ಹೋರಾಟಗಾರ ಸಂಘಟನೆ ಹಮಾಸ್ ಹಾಗೂ ಇಸ್ರೇಲ್ ಸೇನೆ ನಡುವೆ ಭೀಕರ ಕಾಳಗ ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ಭಾರತೀಯರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರುವ ಕಾರ್ಯಾಚರಣೆಯನ್ನು ಭಾರತ ಆರಂಭಿಸಿದೆ.

ಶುಕ್ರವಾರದಂದು 212 ಭಾರತೀಯರಿದ್ದ ಮೊದಲ ತಂಡವು ಇಸ್ರೇಲ್ ನಿಂದ ಹೊಸದಿಲ್ಲಿಗೆ ಆಗಮಿಸಿತ್ತು.

ಆಕ್ಟೋಬರ್ 7 ರಂದು ಹಮಾಸ್ ಹೋರಾಟಗಾರರು ಇಸ್ರೇಲ್ ನ ನಗರಗಳ ಮೇಲೆ ದಾಳಿ ನಡೆಸಿದ ಬಳಿಕ ಇಸ್ರೇಲ್ ಹಾಗೂ ಫೆಲೆಸ್ತೀನಿನ ಗಾಝಾ ಪ್ರದೇಶದಲ್ಲಿ ಸಂಘರ್ಷದ ಪರಿಸ್ಥಿತಿಯುಂಟಾಗಿದೆ.

ಇಸ್ರೇಲ್ ನಿಂದ 235 ಭಾರತೀಯ ಪ್ರಜೆಗಳನ್ನೊಳಗೊಂಡ ಎರಡನೆ ತಂಡವು ಶುಕ್ರವಾರ ರಾತ್ರಿ 11:02ಕ್ಕೆ ಸುರಕ್ಷಿತವಾಗಿ ಹಾರಾಟವನ್ನು ಆರಂಭಿಸಿದ್ದು, ಇಂದು ಬೆಳಗ್ಗೆ ಹೊಸದಿಲ್ಲಿಯಲ್ಲಿ ಬಂದಿಳಿದಿದೆ. ಭಾರತೀಯ ಪ್ರಜೆಗಳ ತೆರವು ಕಾರ್ಯಾಚರಣೆಯು ರವಿವಾರವೂ ಮುಂದುವರಿಯಲಿದೆ ಎಂದು ಮೂಲಗಳು ತಿಳಿಸಿವೆ.

ಆಪರೇಶನ್ ಅಜಯ್ ಕಾರ್ಯಾಚರಣೆಯಡಿ ರವಿವಾರ ಭಾರತಕ್ಕೆ ತೆರಳಲಿರುವ ವಿಮಾನಕ್ಕೆ ಹೆಸರು ನೋಂದಾಯಿಸಿದ ಭಾರತೀಯ ಪೌರರ ಮುಂದಿನ ತಂಡಕ್ಕೆ ಶನಿವಾರ ಇಮೇಲ್ ಮೂಲಕ ಕಳುಹಿಸಲಾಗಿದೆ. ಭಾರತಕ್ಕೆ ತೆರಳಲು ಹೆಸರು ನೋಂದಾಯಿಸಿದ ಇತರ ವ್ಯಕ್ತಿಗಳಿಗೂ ಸಂದೇಶಗಳನ್ನು ಬಳಿಕ ಕಳುಹಿಸಲಾಗುವುದು ಎಂದು ಭಾರತೀಯ ರಾಯಭಾರಿ ಕಚೇರಿಯು ಸಾಮಾಜಿಕ ಜಾಲತಾಣ ‘x ನಲ್ಲಿ ಪೋಸ್ಟ್ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News