ಭಯೋತ್ಪಾದಕರ ವಿರುದ್ಧದ ನಮ್ಮ ಹೋರಾಟದ ವೇಳೆ ಪಾಕ್ ಸೈನ್ಯ ಮಧ್ಯಪ್ರವೇಶಿಸಿದೆ: ಏರ್ ಮಾರ್ಷಲ್ ಎ.ಕೆ. ಭಾರ್ತಿ
Photo credit: PTI
ಹೊಸದಿಲ್ಲಿ : ಭಾರತದ ಹೋರಾಟವು ಪಾಕಿಸ್ತಾನದಲ್ಲಿರುವ ಭಯೋತ್ಪಾದಕರು ಮತ್ತು ಭಯೋತ್ಪಾದಕರ ನೆಲೆಗಳ ಮೇಲಾಗಿದೆ, ಹೊರತು ಸೈನ್ಯದ ವಿರುದ್ಧವಲ್ಲ. ಆದರೆ ಪಾಕಿಸ್ತಾನಿ ಸೇನೆ ಮಧ್ಯಪ್ರವೇಶಿಸಿತು ಎಂದು ಏರ್ ಮಾರ್ಷಲ್ ಎ.ಕೆ. ಭಾರ್ತಿ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ನಿವಾಸದಲ್ಲಿ ನಡೆದ ಸಚಿವರು ಮತ್ತು ಮಿಲಿಟರಿ ಅಧಿಕಾರಿಗಳ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಏರ್ ಮಾರ್ಷಲ್ ಎ.ಕೆ. ಭಾರ್ತಿ, ಭಾರತದ ಎಲ್ಲಾ ಸೇನಾ ನೆಲೆಗಳು ಸುರಕ್ಷಿತವಾಗಿರುತ್ತವೆ, ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ದೇಶದ ವಿರುದ್ಧದ ಯಾವುದೇ ದಾಳಿಯನ್ನು ಎದುರಿಸಲು ಸಿದ್ಧವಾಗಿವೆ ಎಂದು ಹೇಳಿದೆ.
ಮೇ 7 ಮತ್ತು 10ರ ನಡುವೆ ಗಡಿ ನಿಯಂತ್ರಣ ರೇಖೆಯಲ್ಲಿ ನಡೆದ ಫಿರಂಗಿ ಮತ್ತು ಗುಂಡಿನ ದಾಳಿಯಲ್ಲಿ ಪಾಕಿಸ್ತಾನದ 35 ರಿಂದ 40 ಸೈನಿಕರು ಹತರಾಗಿದ್ದಾರೆ ಎಂದು ಡಿಜಿಎಂಒ ರವಿವಾರ ತಿಳಿಸಿತ್ತು.
ಭಾರತ ಮತ್ತು ಪಾಕಿಸ್ತಾನ ನಡುವಿನ ಡಿಜಿಎಂಒಗಳ ಮಾತುಕತೆ ಇಂದು ಸಂಜೆ 5 ಗಂಟೆಗೆ ನಡೆಯಲಿದೆ.