×
Ad

ದಿಲ್ಲಿಯ 20ಕ್ಕೂ ಅಧಿಕ ಶಾಲೆಗಳಿಗೆ ಬಾಂಬ್ ಬೆದರಿಕೆ : ಪೊಲೀಸರಿಂದ ಪರಿಶೀಲನೆ

Update: 2025-07-18 11:13 IST

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ : ಶುಕ್ರವಾರ ಬೆಳಿಗ್ಗೆ ದಿಲ್ಲಿಯ 20ಕ್ಕೂ ಅಧಿಕ ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶವನ್ನು ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಾಲೆಗಳಲ್ಲಿ ಬಾಂಬ್ ನಿಷ್ಕ್ರಿಯ ದಳ, ಸ್ವಾನ ದಳ ಮತ್ತು ಪೊಲೀಸರ ತಂಡ ಶೋಧ ಕಾರ್ಯ ನಡೆಸುತ್ತಿದೆ ಎಂದು ತಿಳಿದು ಬಂದಿದೆ.

ಇಮೇಲ್ ಸ್ವೀಕರಿಸಿದ ಶಾಲೆಗಳಲ್ಲಿ ಸಿವಿಲ್ ಲೈನ್ಸ್‌ನ ಸೇಂಟ್ ಕ್ಸೇವಿಯರ್ಸ್, ಪಶ್ಚಿಮ ವಿಹಾರ್‌ನ ರಿಚ್ಮಂಡ್ ಗ್ಲೋಬಲ್ ಸ್ಕೂಲ್, ರೋಹಿಣಿಯ ಅಭಿನವ್ ಪಬ್ಲಿಕ್ ಸ್ಕೂಲ್ ಮತ್ತು ರೋಹಿಣಿಯ ದಿ ಸಾವರಿನ್ ಸ್ಕೂಲ್ ಸೇರಿವೆ.

ಬುಧವಾರ ದಿಲ್ಲಿಯ 5 ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಕಳುಹಿಸಲಾಗಿತ್ತು. ಪೊಲೀಸರು ಪರಿಶೀಲನೆ ನಡೆಸಿದಾಗ ಅದು ಹುಸಿ ಬಾಂಬ್ ಕರೆ ಎನ್ನುವುದು ಬಯಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News