×
Ad

ಗುಜರಾತ್ | ಕಾಂಡ್ಲಾ ಏರ್ ಪೋರ್ಟ್ ನಲ್ಲಿ ಟೇಕ್ ಆಫ್ ಆಗುವಾಗಲೇ ಕಳಚಿದ ವಿಮಾನದ ಚಕ್ರ!

► ಮುಂಬೈ ನಲ್ಲಿ ಸುರಕ್ಷಿತವಾಗಿ ಇಳಿದ ಸ್ಪೈಸ್‌ಜೆಟ್ ವಿಮಾನ

Update: 2025-09-12 17:30 IST

    PC  : hindustantimes

ಮುಂಬೈ: ಕಾಂಡ್ಲಾ ವಿಮಾನ ನಿಲ್ದಾಣದಿಂದ ಮುಂಬೈಗೆ ಹೊರಟಿದ್ದ ಸ್ಪೈಸ್‌ಜೆಟ್ ಬೊಂಬಾರ್ಡಿಯರ್ Q400 ವಿಮಾನವು ಶುಕ್ರವಾರ ಟೇಕ್‌ಆಫ್ ನಂತರ ತಾಂತ್ರಿಕ ದೋಷ ಉಂಟಾದ ಹಿನ್ನೆಲೆಯಲ್ಲಿ ಮುಂಬೈ ವಿಮಾನ ನಿಲ್ದಾಣದಲ್ಲಿ ಪೂರ್ಣ ತುರ್ತು ಪರಿಸ್ಥಿತಿ ಘೋಷಿಸಲಾಯಿತು.

ವಿಮಾನವು ಹಾರಾಟ ಆರಂಭಿಸಿದ ಕೆಲವೇ ಕ್ಷಣಗಳಲ್ಲಿ ಅದರ ಚಕ್ರಗಳಲ್ಲಿ ಒಂದು ರನ್‌ವೇಯಲ್ಲಿ ಬಿದ್ದಿರುವುದು ಕಂಡು ಬಂತು. 75 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಈ ವಿಮಾನವು ತಾಂತ್ರಿಕ ದೋಷದ ನಡುವೆಯೂ ತನ್ನ ಪ್ರಯಾಣವನ್ನು ಮುಂದುವರೆಸಿ ಮುಂಬೈ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಯಿತು.

ಲ್ಯಾಂಡಿಂಗ್ ನಂತರ ವಿಮಾನವು ಯಾವುದೇ ಸಹಾಯ ಪಡೆಯದೇ ಟ್ಯಾಕ್ಸಿ ವೇಯಲ್ಲಿ ಟರ್ಮಿನಲ್‌ ಗೆ ಸಾಗಿದ್ದು, ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿ ಇಳಿದರು.  ವಿಮಾನ ನಿಲ್ದಾಣ ಪ್ರಾಧಿಕಾರಗಳು ಹಾಗೂ ಸಿಬ್ಬಂದಿಯ ತಕ್ಷಣದ ಸಮನ್ವಯತೆಯಿಂದ ಅಪಾಯ ತಪ್ಪಿತು.

ಘಟನೆಯ ಕುರಿತು ಸ್ಪೈಸ್‌ಜೆಟ್ ಏರ್‌ಲೈನ್ಸ್ ತಾಂತ್ರಿಕ ಪರಿಶೀಲನೆ ನಡೆಸುತ್ತಿದ್ದು, ಭವಿಷ್ಯದಲ್ಲಿ ಇಂತಹ ದೋಷಗಳು ಮರುಕಳಿಸದಂತೆ ಕ್ರಮ ಕೈಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News