×
Ad

ಸಂಸತ್ತಿನ ಮುಂಗಾರು ಅಧಿವೇಶನ | ಚುನಾವಣಾ ಆಯೋಗದ ಪ್ರಧಾನ ಕಚೇರಿಗೆ ಮೆರವಣಿಗೆ ನಡೆಸುತ್ತಿದ್ದ ವಿಪಕ್ಷಗಳ ಸಂಸದರನ್ನು ತಡೆದ ಪೊಲೀಸರು

ಬ್ಯಾರಿಕೇಡ್ ಹತ್ತಿ ಮುಂದಕ್ಕೆ ತೆರಳಲು ಯತ್ನಿಸಿದ ಕೆಲ ಸಂಸದರು

Update: 2025-08-11 12:09 IST

Photo | deccanherald

ಹೊಸದಿಲ್ಲಿ : ಮತಗಳ ಕಳ್ಳತನ ಆರೋಪ ಮತ್ತು ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಖಂಡಿಸಿ ಚುನಾವಣಾ ಆಯೋಗದ ಪ್ರಧಾನ ಕಚೇರಿಗೆ ಮೆರವಣಿಗೆ ನಡೆಸುತ್ತಿದ್ದ ವಿಪಕ್ಷಗಳ ಸಂಸದರನ್ನು ದಿಲ್ಲಿ ಪೊಲೀಸರು ತಡೆದಿದ್ದಾರೆ.

ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಸೇರಿದಂತೆ ವಿರೋಧ ಪಕ್ಷದ ಸಂಸದರು ಸಂಸತ್ತಿನ ಮಕರ ದ್ವಾರದಿಂದ ಭಾರತೀಯ ಚುನಾವಣಾ ಆಯೋಗದ ಕಚೇರಿಗೆ ಮೆರವಣಿಗೆ ಸಾಗಿದ್ದಾರೆ. ಈ ವೇಳೆ ಬ್ಯಾರಿಕೇಡ್‌ಗಳನ್ನು ಹಾಕಿ ಪೊಲೀಸರು ತಡೆದಿದ್ದು, ಕೆಲ ಸಂಸದರ ಬ್ಯಾರಿಕ್ಯಾಡ್‌ ಮೇಲೆ ಹತ್ತಿ ಮುಂದಕ್ಕೆ ಸಾಗಲು ಪ್ರಯತ್ನಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News