×
Ad

ಪ್ರಧಾನಿ ಮೋದಿಗೆ ಫ್ರೆಂಚ್ ಅಧ್ಯಕ್ಷರ ಆತ್ಮೀಯ ಸ್ವಾಗತ

Update: 2025-02-11 08:30 IST

PC: x.com/narendramod

ಪ್ಯಾರಿಸ್: ನಗರದಲ್ಲಿ ನಡೆಯುವ ಎಐ ಶೃಂಗಸಭೆಗೆ ಆಗಮಿಸಿದ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಮುನ್ನಾ ದಿನ ರಾತ್ರಿಯ ಔತಣಕೂಟದಲ್ಲಿ ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರೋನ್ ಆತ್ಮೀಯವಾಗಿ ಆಲಿಂಗಿಸಿಕೊಂಡು ಸ್ವಾಗತಿಸಿದರು.

"ಪ್ಯಾರೀಸ್ ನಲ್ಲಿ ಆತ್ಮೀಯ ಸ್ನೇಹಿತ, ಅಧ್ಯಕ್ಷ ಮ್ಯಾಕ್ರೋನ್ ಅವರನ್ನು ಭೇಟಿ ಮಾಡಿರುವುದು ಅತೀವ ಆನಂದ ತಂದಿದೆ" ಎಂದು ಮೋದಿ ಎಕ್ಸ್ ಪೋಸ್ಟ್ ನಲ್ಲಿ ಬಣ್ಣಿಸಿದ್ದಾರೆ. ಈ ಔತಣಕೂಟದಲ್ಲಿ ಪ್ರಧಾನಿ ಅವರು, ಅಮೆರಿಕದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ಅವರನ್ನೂ ಭೇಟಿ ಮಾಡಿದರು.

ಇದಕ್ಕೂ ಮುನ್ನ ಎರಡು ರಾಷ್ಟ್ರಗಳ ಪ್ರವಾಸದ ಮೊದಲ ಹಂತದಲ್ಲಿ ಮೋದಿ ಪ್ಯಾರಿಸ್ಗೆ ಆಗಮಿಸಿದರು. ಫ್ರಾನ್ಸ್ ಭೇಟಿಯ ಬಳಿಕ ಮೋದಿ ಅಮೆರಿಕಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಮೂರು ದಿನಗಳ ಫ್ರಾನ್ಸ್ ಭೇಟಿಯ ವೇಳೆ ಎಐ ಆ್ಯಕ್ಷನ್ ಸಮಿಟ್ ನ ಸಹ ಅಧ್ಯಕ್ಷತೆಯನ್ನು ಮ್ಯಾಕ್ರೋನ್ ಜತೆ ವಹಿಸಲಿದ್ದಾರೆ. ಜತೆಗೆ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆಯನ್ನೂ ನಡೆಸುವರು ಹಾಗೂ ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡುವರು.

ಮೋದಿ ಪ್ಯಾರಿಸ್ನಲ್ಲಿ ಬಂದಿಳಿದಾಗ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಭಾರತೀಯ ಮೂಲದವರು ಭವ್ಯವಾಗಿ ಸ್ವಾಗತಿಸಿದರು. "ಪ್ಯಾರಿಸ್ನಲ್ಲಿ ಸ್ಮರಣೀಯ ಸ್ವಾಗತ. ಚಳಿ ಭಾರತೀಯ ಸಮುದಾಯವನ್ನು ಆತ್ಮೀಯತೆಯ ಪ್ರದರ್ಶನದಿಂದ ಹಿಂದುಳಿಯುಂತೆ ಮಾಡಿಲ್ಲ. ಭಾರತೀಯ ಸಮುದಾಯಕ್ಕೆ ಕೃತಜ್ಞತೆಗಳು ಹಾಗೂ ಅವರ ಆತ್ಮೀಯತೆ ಬಗ್ಗೆ ಹೆಮ್ಮೆಪಡುತ್ತೇನೆ" ಎಂದು ಮೋದಿ ತಿಳಿಸಿದರು.

ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಗೆ ಸೇರಲು ಕ್ಲಿಕ್‌ ಮಾಡಿ ►https://whatsapp.com/channel/0029VaA8ju86LwHn9OQpEq28

 Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News