×
Ad

ಪಂಜಾಬ್: ಎಎಪಿ ಮುಖಂಡನ ಮೇಲೆ ಗುಂಡಿನ ದಾಳಿ ನಡೆಸಿದ ಶಿರೋಮಣಿ ಅಕಾಲಿದಳದ ನಾಯಕ

Update: 2024-10-06 12:41 IST

PC : NDTV 

ಪಂಜಾಬ್: ಎಎಪಿ ಮುಖಂಡನೋರ್ವನ ಮೇಲೆ ಶಿರೋಮಣಿ ಅಕಾಲಿದಳದ ನಾಯಕ ಗುಂಡಿನ ದಾಳಿ ನಡೆಸಿರುವ ಘಟನೆ ಪಂಜಾಬ್ನ ಫಾಜಿಲ್ಕಾ ಜಿಲ್ಲೆಯಲ್ಲಿ ನಡೆದಿದೆ.

ಎಎಪಿಯ ಸ್ಥಳೀಯ ನಾಯಕ ಮನದೀಪ್ ಸಿಂಗ್ ಬ್ರಾರ್ ಅವರನ್ನು ಲುಧಿಯಾನದ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಎಎಪಿ ನಾಯಕನ ಮೇಲೆ ಅಕಾಲಿದಳದ ನಾಯಕ ವರದೇವ್ ಸಿಂಗ್ ಮಾನ್ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಜಲಾಲಾಬಾದ್ ಎಎಪಿ ಶಾಸಕ ಜಗದೀಪ್ ಕಾಂಬೋಜ್ ಗೋಲ್ಡಿ ಆರೋಪಿಸಿದ್ದಾರೆ

ಫಾಜಿಲ್ಕಾ ಜಿಲ್ಲೆಯ ಬಿಡಿಪಿಒ ಕಚೇರಿಯ ಹೊರಗೆ ಘಟನೆ ನಡೆದಿದ್ದು, ಫಾಜಿಲ್ಕಾ ಜಿಲ್ಲಾ ಹಿರಿಯ ಪೊಲೀಸ್ ಅಧಿಕಾರಿ ವರೀಂದರ್ ಸಿಂಗ್ ಬ್ರಾರ್ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಮಾಜಿ ಸಂಸದ ಜೋರಾ ಸಿಂಗ್ ಮಾನ್ ಅವರ ಪುತ್ರ ವರದೇವ್ ಸಿಂಗ್ ನೋನಿ ಮಾನ್ ಶಾಲೆಗೆ ಸಂಬಂಧಿಸಿದ ಫೈಲ್ ತೆರವುಗೊಳಿಸುವಂತೆ ಆಗ್ರಹಿಸಿ ಬಿಡಿಪಿಒ ಕಚೇರಿಗೆ ಬಂದಿದ್ದು, ಅವರ ನಿರ್ದೇಶನವನ್ನು ಪಾಲಿಸಲು ಬಿಡಿಪಿಒ ನಿರಾಕರಿಸಿದಾಗ ಅಸಮಾಧಾನಗೊಂಡು ಕಚೇರಿಯಿಂದ ಹೊರನಡೆದಿದ್ದಾರೆ. ಕಚೇರಿಯ ಹೊರಗೆ ಎಎಪಿ ನಾಯಕ ಮನದೀಪ್ ಸಿಂಗ್ ಬ್ರಾರ್ ಮತ್ತು ವರದೇವ್ ಸಿಂಗ್ ನಡುವೆ ಯಾವುದೋ ವಿಚಾರಕ್ಕೆ ವಾಗ್ವಾದ ನಡೆದು ವರದೇವ್ ಸಿಂಗ್ ನೋನಿ ಫೈರಿಂಗ್ ಮಾಡಿದ್ದಾರೆ. ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News