ದ್ವಿಮುಖ ನೀತಿಯನ್ನು ನಿಲ್ಲಿಸಿ ಇಸ್ರೇಲ್ ಅನ್ನು ಶಿಕ್ಷಿಸಿ : ಜಾಗತಿಕ ಸಮುದಾಯಕ್ಕೆ ಖತರ್ ಪ್ರಧಾನಿ ಒತ್ತಾಯ
Update: 2025-09-14 21:47 IST
Photo: AFP
ದೋಹಾ : ದ್ವಿಮುಖ ನೀತಿಯನ್ನು ನಿಲ್ಲಿಸಿ ಇಸ್ರೇಲ್ ಅನ್ನು ಶಿಕ್ಷಿಸಿ ಎಂದು ಖತರ್ ಪ್ರಧಾನಿ ಶೇಖ್ ಮುಹಮ್ಮದ್ ಬಿನ್ ಅಬ್ದುಲ್ ರೆಹಮಾನ್ ಅಲ್ ಥಾನಿ ರವಿವಾರ ಅಂತಾರಾಷ್ಟ್ರೀಯ ಸಮುದಾಯಕ್ಕೆ ಆಗ್ರಹಿಸಿದ್ದಾರೆ.
ಅಂತಾರಾಷ್ಟ್ರೀಯ ಸಮುದಾಯ ದ್ವಿಮುಖ ನೀತಿಯನ್ನು ನಿಲ್ಲಿಸಿ ಇಸ್ರೇಲ್ ಮಾಡಿದ ಅಪರಾಧಗಳಿಗೆ ಶಿಕ್ಷೆ ವಿಧಿಸಬೇಕು. ಗಾಝಾದಲ್ಲಿ ಯುದ್ಧವನ್ನು ಕೊನೆಗೊಳಿಸಲು ಈಜಿಪ್ಟ್ ಮತ್ತು ಅಮೆರಿಕ ಜೊತೆ ಖತರ್ ಮಧ್ಯಸ್ಥಿಕೆ ಪ್ರಯತ್ನಗಳನ್ನು ಮುಂದವರಿಸಲಿದೆ ಎಂದು ಶೇಖ್ ಮುಹಮ್ಮದ್ ಬಿನ್ ಅಬ್ದುಲ್ ರೆಹಮಾನ್ ಅಲ್ ಥಾನಿ ಹೇಳಿದರು.
ಹಮಾಸ್ ನಾಯಕರನ್ನು ಗುರಿಯಾಗಿಸಿಕೊಂಡು ಖತರ್ ಮೇಲೆ ಇಸ್ರೇಲ್ ವಾಯುದಾಳಿ ನಡೆಸಿದ ಹಿನ್ನೆಲೆ ನಿಗದಿಯಾಗಿರುವ ಅರಬ್ ಮತ್ತು ಇಸ್ಲಾಮಿಕ್ ನಾಯಕರ ತುರ್ತು ಶೃಂಗಸಭೆಯ ಮುನ್ನಾದಿನದಂದು ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಶೇಖ್ ಮುಹಮ್ಮದ್ ಬಿನ್ ಅಬ್ದುಲ್ ರೆಹಮಾನ್ ಈ ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ.