×
Ad

ರಾಹುಲ್ ಗಾಂಧಿ ಅರ್ಜಿ:ನಾಳೆ ಗುಜರಾತ್ ಹೈಕೋರ್ಟ್ ತೀರ್ಪು

Update: 2023-07-06 23:58 IST

Rahul Gandhi | PHOTO : PTI

ಹೊಸದಿಲ್ಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ತನ್ನ ಮೋದಿ ಉಪನಾಮ ಹೇಳಿಕೆ ಗಾಗಿ ದಾಖಲಾದ ಮಾನಹಾನಿ ಪ್ರಕರಣದಲ್ಲಿ ಸಲ್ಲಿಸಿರುವ ಪುನರ್‌ಪರಿಶೀಲನೆ ಅರ್ಜಿ ಕುರಿತು ತನ್ನ ತೀರ್ಪನ್ನು ಗುಜರಾತ್ ಉಚ್ಚ ನ್ಯಾಯಾಲಯವು ಶುಕ್ರವಾರ ಪ್ರಕಟಿಸಲಿದೆ.

ಈ ಹಿಂದೆ ರಾಹುಲ್‌ಗೆ ಪ್ರಕರಣದಲ್ಲಿ ಮಧ್ಯಂತರ ರಕ್ಷಣೆಯನ್ನು ನೀಡಲು ನಿರಾಕರಿಸಿದ್ದ ನ್ಯಾಯಾಲಯವು ಅವರ ಅರ್ಜಿಯನ್ನು ಪರಿಶೀಲನೆಗಾಗಿ ಕಾಯ್ದಿರಿಸಿತ್ತು.

ರಾಹುಲ್ ಅವರ ದೋಷನಿರ್ಣಯಕ್ಕೆ ನ್ಯಾಯಾಲಯವು ತಡೆ ನೀಡಿದರೆ ಲೋಕಸಭೆ ಸದಸ್ಯತ್ವದಿಂದ ಅವರ ಅನರ್ಹತೆಯನ್ನು ಹಿಂದೆಗೆದುಕೊಳ್ಳಬಹುದು.

ಆದರೆ ತೀರ್ಪು ತನಗೆ ಪೂರಕವಾಗಿರದಿದ್ದರೆ ಗುಜರಾತ ಉಚ್ಚ ನ್ಯಾಯಾಲಯದ ಮೇಲಿನ ಪೀಠದ ಮುಂದೆ ಮೇಲ್ಮನವಿಯನ್ನು ಸಲ್ಲಿಸುವ ಆಯ್ಕೆಯನ್ನು ರಾಹುಲ್ ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News