×
Ad

ಸಂಸತ್ತಿನಲ್ಲಿ ಶಿವನ ಚಿತ್ರ ಪ್ರದರ್ಶಿಸಿದ ರಾಹುಲ್‌ ಗಾಂಧಿ, ಆಕ್ಷೇಪಿಸಿದ ಸ್ಪೀಕರ್‌

Update: 2024-07-01 16:28 IST

Photo credit: indiatoday.in

ಹೊಸದಿಲ್ಲಿ: ಲೋಕಸಭೆಯಲ್ಲಿ ಇಂದು ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು ಶಿವನ ಚಿತ್ರ ಪ್ರದರ್ಶಿಸಿದ್ದಕ್ಕೆ ಸ್ಪೀಕರ್‌ ಓಂ ಬಿರ್ಲಾ ಆಕ್ಷೇಪಿಸಿದ್ದಾರೆ. ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಮಾತನಾಡಿದ ರಾಹುಲ್‌ “ಹಿಂದು ಧರ್ಮ ಭೀತಿ ಮತ್ತು ದ್ವೇಷ ಹರಡಲು ಸಾಧ್ಯವಿಲ್ಲ, ಆದರೆ ಬಿಜೆಪಿ ಅದನ್ನೇ ಮಾಡುತ್ತಿದೆ,” ಎಂದು ಹೇಳಿದರು.

ಎಲ್ಲ ಧರ್ಮಗಳು ಧೈರ್ಯದ ಬಗ್ಗೆ ಮಾತನಾಡುತ್ತವೆ ಎಂದು ಹೇಳಿದ ಅವರು. ಇಸ್ಲಾಂ ಮತ್ತು ಸಿಖ್‌ ಧರ್ಮ ಕೂಡ ನಾವು ನಿರ್ಭೀತಿಯಿಂದಿರಬೇಕು ಎಂದು ಹೇಳಿವೆ ಎಂದರು.

“ಎಲ್ಲಾ ಮಹಾನ್‌ ವ್ಯಕ್ತಿಗಳು ಅಹಿಂಸೆ ಬಗ್ಗೆ ಮಾತನಾಡಿದ್ದಾರೆ. ಆದರೆ ತಮ್ಮನ್ನು ಹಿಂದುಗಳೆಂದು ಕರೆದುಕೊಳ್ಳುವವರು ಹಿಂಸೆ, ದ್ವೇಷ ಮತ್ತು ಸುಳ್ಳಿನ ಬಗ್ಗೆ ಮಾತನಾಡುತ್ತಾರೆ,” ಎಂದರು.

ಆದರೆ ರಾಹುಲ್‌ ತಮ್ಮ ಭಾಷಣದ ವೇಳೆ ಶಿವನ ಚಿತ್ರ ಪ್ರದರ್ಶಿಸಿದ್ದಕ್ಕೆ ಆಕ್ಷೇಪಿಸಿದ ಸ್ಪೀಕರ್‌ “ಈ ರೀತಿ ಭಿತ್ತಿಪತ್ರಗಳ ಪ್ರದರ್ಶನಕ್ಕೆ ನಿಯಮಗಳು ಅನುಮತಿಸುವುದಿಲ್ಲ,” ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News