×
Ad

ಪ್ರಧಾನಿ ಮೋದಿಯನ್ನು ʼನೆಚ್ಚಿನ ನಟʼ ಎಂದು ಕರೆದ ರಾಜಸ್ಥಾನ ಸಿಎಂ!

Update: 2025-03-11 19:55 IST

Photo | indianexpress

ಜೈಪುರ: ರಾಜಸ್ಥಾನದ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಪ್ರಧಾನಿ ನರೇಂದ್ರ ಮೋದಿ ಅವರನ್ನು ನನ್ನ ʼನೆಚ್ಚಿನ ನಟʼ ಎಂದು ಹೇಳಿದ್ದಾರೆ. ಪ್ರಧಾನಿ ಮೋದಿಯ ಬಗ್ಗೆ ಬಿಜೆಪಿ ಸರಕಾರದ ಮುಖ್ಯಮಂತ್ರಿಯೋರ್ವರು ನೀಡಿರುವ ಹೇಳಿಕೆ ವಿವಾದವನ್ನು ಹುಟ್ಟು ಹಾಕಿದೆ.

ರಾಜಸ್ಥಾನದ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಅವರ ಹೇಳಿಕೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅದರಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ನನ್ನ ನೆಚ್ಚಿನ ನಟ ಎಂದು ಕರೆಯುತ್ತಾರೆ. ಸಿಎಂ ಹೇಳಿಕೆ ಬೆನ್ನಲ್ಲೇ ಕಾಂಗ್ರೆಸ್ ತೀವ್ರವಾಗಿ ಟೀಕಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಚರ್ಚೆಗಳು ಕೂಡ ನಡೆಯುತ್ತಿವೆ. ಕೆಲವು ಸಾಮಾಜಿಕ ಜಾಲತಾಣಗಳ ಬಳಕೆದಾರರು ವೀಡಿಯೊವನ್ನು ಎಡಿಟ್ ಮಾಡಲಾಗಿದೆ ಎಂದು ಹೇಳಿದರೆ, ಕೆಲವರು ಭಜನ್ ಲಾಲ್ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.

ರಾಜಸ್ಥಾನ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಗೋವಿಂದ್ ಸಿಂಗ್ ದೋತಸ್ರಾ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಈ ಕುರಿತ ವೀಡಿಯೊ ಹಂಚಿಕೊಂಡ ಬಳಿಕ ವಿವಾದ ಭುಗಿಲೆದ್ದಿತು. ನಾವು ಬಹಳ ಸಮಯದಿಂದ ಮೋದಿ ನಾಯಕನಲ್ಲ, ನಟ ಎಂದು ಹೇಳುತ್ತಿದ್ದೇವೆ. ತಡವಾಗಿಯಾದರೂ, ಬಿಜೆಪಿಯ ಮುಖ್ಯಮಂತ್ರಿ ಮೋದಿ ಜನ ನಾಯಕನಲ್ಲ, ಅವರು ನಟ ಎಂದು ಹೇಳಲು ಪ್ರಾರಂಭಿಸಿದ್ದಾರೆ. ಅವರು ಕ್ಯಾಮೆರಾ ಕಲೆಯಲ್ಲಿ ಪರಿಣತರು, ಟೆಲಿಪ್ರಾಂಪ್ಟರ್ಗಳಲ್ಲಿ ಮತ್ತು ನಿರರ್ಗಳ ಭಾಷಣಗಳಲ್ಲಿ ಪರಿಣತಿ ಹೊಂದಿದ್ದಾರೆ ಎಂದು ಹೇಳಿದರು.

ಈ ಕುರಿತು ರಾಜಸ್ಥಾನ ಬಿಜೆಪಿ ವಕ್ತಾರ ಲಕ್ಷ್ಮೀಕಾಂತ್ ಭಾರದ್ವಾಜ್ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿ, ಮುಖ್ಯಮಂತ್ರಿ ಅವರಲ್ಲಿ ಸರ್, ನಿಮ್ಮ ನೆಚ್ಚಿನ ಹೀರೋ ಯಾರು? ಎಂದು ಕೇಳಲಾಯಿತು. ಅದಕ್ಕೆ ಅವರು ನರೇಂದ್ರ ಮೋದಿ ಜೀ ಎಂದು ಉತ್ತರಿಸಿದರು. ಯಾವಾಗಲೂ ಒಂದೇ ಕುಟುಂಬದ ಅಧೀನದಲ್ಲಿರುವ ಕಾಂಗ್ರೆಸ್ ಸದಸ್ಯರು ವೀಡಿಯೊವನ್ನು ಸಂಪಾದಿಸಲು ಮತ್ತು ಸುಳ್ಳು ನಿರೂಪಣೆ ಮಾಡುವಲ್ಲಿ ವಿಫಲರಾಗಿದ್ದಾರೆ ಎಂದು ಹೇಳಿದರು.

ವಿವಾದದ ಬಗ್ಗೆ ರಾಜಸ್ಥಾನದ ಪ್ರತಿಪಕ್ಷದ ನಾಯಕ ಟಿಕಾರಾಂ ಜೂಲಿ ಪ್ರತಿಕ್ರಿಯಿಸಿ, ಮೋದಿಜಿ ಕಾವಲುಗಾರನಲ್ಲ, ಮಹಾನ್ ಕಲಾವಿದ ಎಂದು ನಾವು ಮೊದಲಿನಿಂದಲೂ ಹೇಳುತ್ತಿದ್ದೇವೆ. ಇಂದು, ರಾಜಸ್ಥಾನದ ಸಿಎಂ ಭಜನ್ ಲಾಲ್ ಶರ್ಮಾ ಅವರೇ ಪ್ರಧಾನಿ ನರೇಂದ್ರ ಮೋದಿ ಸಾರ್ವಜನಿಕ ಸೇವಕನಲ್ಲ, ಅವರು ನಟ ಎಂದು ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News