×
Ad

ರಾಜಸ್ಥಾನ: ಕಾಂಗ್ರೆಸ್ ಸರಕಾರದಲ್ಲಿ ಸಚಿವರಾಗಿದ್ದ ಮಹೇಂದ್ರಜಿತ್ ಮಾಲವಿಯ ಬಿಜೆಪಿಗೆ ಸೇರ್ಪಡೆ

Update: 2024-02-19 22:13 IST

ಮಹೇಂದ್ರಜಿತ್ ಸಿಂಗ್ | Photo: ANI 

ಜೈಪುರ : ನಾಲ್ಕು ಬಾರಿ ಕಾಂಗ್ರೆಸ್ ಶಾಸಕರಾಗಿದ್ದ ಹಾಗೂ ಎರಡು ಬಾರಿ ಸಚಿವರಾಗಿದ್ದ ರಾಜಸ್ಥಾನದ ಮಾಜಿ ಸಚಿವ ಮಹೇಂದ್ರಜಿತ್ ಸಿಂಗ್ ಮಾಲವಿಯ ಅವರು ಸೋಮವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇದರಿಂದ ಕಾಂಗ್ರೆಸ್ ಗೆ ಭಾರೀ ಹಿನ್ನಡೆ ಉಂಟಾಗಿದೆ.

ಮಾಲವಿಯ ಅವರನ್ನು ಬಿಜೆಪಿಯ ರಾಜಸ್ತಾನದ ಉಸ್ತುವಾರಿ ಅರುಣ್ ಸಿಂಗ್, ರಾಜ್ಯ ಘಟಕದ ಮುಖ್ಯಸ್ಥ ಸಿ.ಪಿ. ಜೋಷಿ ಹಾಗೂ ಇತರ ನಾಯಕರು ಬಿಜೆಪಿಗೆ ಬರ ಮಾಡಿಕೊಂಡರು.

‘‘ಅಭಿವೃದ್ಧಿ ದೊಡ್ಡ ವಿಷಯ. ಇಲ್ಲಿ ಡಬಲ್ ಎಂಜಿನ್ ಸರಕಾರ ಇದೆ. ರಾಜ್ಯ ಹಾಗೂ ದೇಶ ಪರಿವರ್ತನೆಗೆ ಒಳಗಾಗುತ್ತಿದೆ. ಇದನ್ನು ಇಡೀ ಜಗತ್ತು ಗಮನಿಸುತ್ತಿದೆ’’ ಎಂದು ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅವರು ಸುದ್ದಿಗಾರರಿಗೆ ತಿಳಿಸಿದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News