×
Ad

ರಾಜಸ್ಥಾನ: ಇಟ್ಟಿಗೆಯ ಗೂಡಿನ ಬಳಿ ಬಾಲಕಿಯ ಮೃತದೇಹ ಪತ್ತೆ , ಅತ್ಯಾಚಾರ ಶಂಕೆ

Update: 2023-08-03 11:41 IST

ಭಿಲ್ವಾರಾ: ರಾಜಸ್ಥಾನದಲ್ಲಿ 14 ವರ್ಷದ ಬಾಲಕಿಯ ಭೀಕರ ಹತ್ಯೆಯು ರಾಜ್ಯದಲ್ಲಿ ಭಾರೀ ಆಘಾತ ಸೃಷ್ಟಿಸಿದ್ದು ರಾಜ್ಯ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳಿರುವಾಗ ನಡೆದಿರುವ ಈ ಘಟನೆಯು ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ.

ಗುರುವಾರ ಭಿಲ್ವಾರದ ಇಟ್ಟಿಗೆ ಗೂಡುವೊಂದರಲ್ಲಿ ಯುವತಿಯ ಸುಟ್ಟ ಅವಶೇಷಗಳು ಪತ್ತೆಯಾಗಿವೆ. ಬಾಲಕಿಯು ತನ್ನ ತಾಯಿಯೊಂದಿಗೆ ಮೇಕೆಗಳನ್ನು ಮೇಯಿಸಲು ಮನೆಯಿಂದ ಹೊರಟುಹೋದ ಗಂಟೆಗಳ ನಂತರ ಇಂದು ಮುಂಜಾನೆ ಈ ಕೃತ್ಯ ಬೆಳಕಿಗೆ ಬಂದಿದೆ.

ಬಾಲಕಿ ಮನೆಗೆ ಹಿಂತಿರುಗದಿದ್ದಾಗ, ಆಕೆಯ ಕುಟುಂಬ ಮತ್ತು ಗ್ರಾಮಸ್ಥರು ರಾತ್ರಿಯಿಡೀ ಹುಡುಕಿದರು ಗುರುವಾರ ಮುಂಜಾನೆ ಮನೆಯ ಸಮೀಪವಿರುವ ಹೊಲದಲ್ಲಿ ಇಟ್ಟಿಗೆ ಗೂಡುಗಳಲ್ಲಿ ಬಾಲಕಿಯ ಅವಶೇಷಗಳು ಕಂಡುಬಂದವು. ಇನ್ನೂ ಉರಿಯುತ್ತಿರುವ ಅವಶೇಷಗಳಲ್ಲಿ ಮೂಳೆಗಳು, ಬೆಳ್ಳಿಯ ಕಾಲುಂಗುರ ಮತ್ತು ಬೂಟುಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

ಹತ್ಯೆ ಮಾಡುವ ಮುನ್ನ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು ಎಂದು ಪೊಲೀಸರು ಶಂಕಿಸಿದ್ದಾರೆ. ಸ್ಥಳದಲ್ಲಿ ಸಿಕ್ಕಿಬಿದ್ದ ಸ್ಥಳೀಯ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News