×
Ad

ರಾಜಸ್ಥಾನ: ದಲಿತ ಗರ್ಭಿಣಿಯ ಅತ್ಯಾಚಾರ ಆರೋಪ; ಪೊಲೀಸ್ ಕಾನ್‌ಸ್ಟೆಬಲ್ ಬಂಧನ

Update: 2025-03-10 21:03 IST

ಸಾಂದರ್ಭಿಕ ಚಿತ್ರ | PC : freepik.com

ಜೈಪುರ: ಜೈಪುರದ ಹೊಟೇಲ್‌ನ ಕೊಠಡಿಯೊಂದರಲ್ಲಿ ಗರ್ಭಿಣಿ ದಲಿತ ಮಹಿಳೆಯೋರ್ವರನ್ನು ಆಕೆಯ ಮೂರು ವರ್ಷದ ಪುತ್ರನ ಎದುರೇ ಅತ್ಯಾಚಾರ ಎಸಗಿದ ಆರೋಪದಲ್ಲಿ ರಾಜಸ್ಥಾನದ 48 ವರ್ಷದ ಪೊಲೀಸ್ ಕಾನ್ಸ್‌ಟೆಬಲ್ ಓರ್ವರನ್ನು ರವಿವಾರ ಇಲ್ಲಿಂದ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತನ್ನ ಮೂರು ವರ್ಷದ ಪುತ್ರನ ಎದುರಲ್ಲೇ ಪತ್ನಿಯ ಅತ್ಯಾಚಾರ ಎಸಗಲಾಗಿದೆ ಎಂದು ಆರೋಪಿಸಿ ಮಹಿಳೆಯ ಪತಿ ಕಾನ್ಸ್‌ಟೆಬಲ್ ಬಾಗಾರಾಮ್ ವಿರುದ್ಧ ಶನಿವಾರ ರಾತ್ರಿ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಸಂಗನೇರ್‌ನ ಪೊಲೀಸ್ ಉಪ ಆಯುಕ್ತ (ಎಸಿಪಿ) ವಿನೋದ್ ಕುಮಾರ್ ಶರ್ಮಾ ಹೇಳಿದ್ದಾರೆ.

ಸಂಗನೇರ್ ಪೊಲೀಸ್ ಠಾಣೆಯಲ್ಲಿ ನಿಯೋಜಿಸಲಾಗಿದ್ದ ಪೊಲೀಸ್ ಕಾನ್ಸ್‌ಟೆಬಲ್‌ನನ್ನು ಆರಂಭದಲ್ಲಿ ವಶಕ್ಕೆ ತೆಗೆದುಕೊಳ್ಳಲಾಯಿತು. ಅನಂತರ ಬಂಧಿಸಲಾಯಿತು ಎಂದು ವಿನೋದ್ ಕುಮಾರ್ ಶರ್ಮಾ ತಿಳಿಸಿದ್ದಾರೆ.

ನೆರೆಯವರು ತನ್ನ ವಿರುದ್ಧ ಶುಕ್ರವಾರ ದಾಖಲಿಸಿದ ದೂರಿಗೆ ಸಂಬಂಧಿಸಿ ಹೇಳಿಕೆ ದಾಖಲಿಸಿಕೊಳ್ಳಲು ತನ್ನ ಗರ್ಭಿಣಿ ಪತ್ನಿ ಹಾಗೂ ಮೂರು ವರ್ಷದ ಪುತ್ರನನ್ನು ಭಾಗಾರಾಮ್ ಶನಿವಾರ ಹೊಟೇಲ್ ಕೊಠಡಿಗೆ ಕರೆದುಕೊಂಡು ಹೋಗಿದ್ದ ಎಂದು ಆಕೆಯ ಪತಿ ಆರೋಪಿಸಿದ್ದಾರೆ.

ಹೇಳಿಕೆ ದಾಖಲಿಸಿಕೊಳ್ಳುವ ನೆಪದಲ್ಲಿ ಆಕೆಯ ಮನೆಯಿಂದ ದೂರದಲ್ಲಿರುವ ಹೊಟೇಲ್‌ಗೆ ಭಾಗಾರಾಮ್ ಕರೆದ ಸಂದರ್ಭ ಆಕೆಯ ಪತಿ ಕೆಲಸದಲ್ಲಿದ್ದರು. ಭಾಗಾರಾಮ್ ಆತನ ಪತ್ನಿ ಹಾಗೂ ಪುತ್ರನನ್ನು ಬೈಕ್‌ನಲ್ಲಿ ಹೊಟೇಲ್‌ಗೆ ಕರೆದುಕೊಂಡು ಹೋಗಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಮಹಿಳೆಗೆ ಬಟ್ಟೆ ಬದಲಾಯಿಸಬೇಕಾಗಿರುವುದರಿಂದ ಕೊಠಡಿಯೊಂದನ್ನು ನೀಡುವಂತೆ ಭಾಗಾರಾಮ್ ಹೊಟೇಲ್ ಸಿಬ್ಬಂದಿಯಲ್ಲಿ ಕೇಳಿದ್ದ. ಅಲ್ಲಿ ಪುತ್ರನ ಎದುರೇ ಆಕೆಯ ಅತ್ಯಾಚಾರ ಎಸಗಿದ್ದ. ಆಕೆ ವಿರೋಧ ವ್ಯಕ್ತಪಡಿಸಿದಾಗ ಭಾಗಾರಾಮ್ ಪತಿಯನ್ನು ಜೈಲಿಗೆ ಕಳುಹಿಸಲಾಗುವುದು ಬೆದರಿಕೆ ಒಡ್ಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಕುರಿತು ಯಾರಿಗಾದರೂ ಹೇಳಿದರೆ ಭೀಕರ ಪರಿಣಾಮ ಎದುರಿಸಬೇಕಾದೀತು ಎಂದು ಕೂಡ ಕಾನ್ಸ್‌ಬಲ್ ಭಾಗಾರಾಮ್ ಬೆದರಿಕೆ ಮಹಿಳೆಗೆ ಒಡ್ಡಿದ್ದ ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News