×
Ad

"ಹನುಮಾನ್‌ ಚಾಲೀಸ ಪಠಣವು ವಿದ್ಯಾರ್ಥಿಯೋರ್ವನಿಗೆ ಅಮೆರಿಕಾದ ಯುನಿವರ್ಸಿಟಿ ಸೇರಲು ಸಹಾಯ ಮಾಡಿತು"

Update: 2023-07-01 14:15 IST

ಕೃಷ್ಣಮೂರ್ತಿ ಸುಬ್ರಮಣಿಯನ್‌ Photo: PTI

ಹೊಸದಿಲ್ಲಿ: ಹಿಂದೂ ಧರ್ಮದ ಸ್ತ್ರೋತ್ರವಾದ ಹನುಮಾನ್‌ ಚಾಲೀಸ ಪಠಿಸುವುದರಿಂದ ಓರ್ವ ವಿದ್ಯಾರ್ಥಿಯು ಅಮೆರಿಕಾ ವಿಶ್ವ ವಿದ್ಯಾಲಯದಲ್ಲಿ ಸೀಟಪು ಪಡೆಯಲು ಸಹಾಯ ಮಾಡಿತು ಎಂದು ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್ ಶುಕ್ರವಾರ ಹೇಳಿಕೆ ನೀಡಿದ್ದಾರೆ ಎಂದು scroll.in ವರದಿ ಮಾಡಿದೆ.

ಸುಬ್ರಮಣಿಯನ್ ಅವರು 2018 ರಿಂದ 2021 ರವರೆಗೆ ಭಾರತದ ಮುಖ್ಯ ಆರ್ಥಿಕ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು. ಅವರು ಪ್ರಸ್ತುತ ಅಂತರಾಷ್ಟ್ರೀಯ ಹಣಕಾಸು ನಿಧಿಯ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ.

ಟ್ವಿಟರ್‌ ನಲ್ಲಿ ಬರೆದುಕೊಂಡಿರುವ ಸುಬ್ರಮಣಿಯನ್‌, ಆ ವಿದ್ಯಾರ್ಥಿ ಸದ್ಯ ಎರಡು ವಿಶ್ವವಿದ್ಯಾಲಯದ ಪಟ್ಟಿಗೆ ಆಯ್ಕೆಯಾಗಿದ್ದಾನೆ ಎಂದು ಉಲ್ಲೇಖಿಸಿದ್ದಾರೆ. "ಕೇವಲ ಅಂತರ್‌ಬೋಧೆಯಿಂದ, ನಾನು ಆ ವಿದ್ಯಾರ್ಥಿ ಮತ್ತು ಆತನ ತಂದೆ ಇಬ್ಬರಿಗೂ ಹನುಮಾನ್‌ ಚಾಲೀಸ ಪ್ರತಿದಿನ ಒಟ್ಟಿಗೆ ಪಠಿಸಲು ಶಿಫಾರಸು ಮಾಡಿದ್ದೇನೆ. ಅವರಿಬ್ಬರೂ ಪ್ರತಿದಿನಿ ಇದನ್ನು ಶ್ರದ್ಧೆಯಿಂದ ಜಪಿಸುತ್ತಿದ್ದರು ಮತ್ತು ಸದ್ಯ ಎರಡು ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಶಾರ್ಟ್‌ಲಿಸ್ಟ್‌ ಆಗಿದ್ದಾನೆ." ಎಂದಿದ್ದಾರೆ.

ಮತ್ತೆ ಮುಂದುವರೆದ ಅವರು, "ಪರೀಕ್ಷೆಯನ್ನು ಬರೆಯುವಾಗ ಅಥವಾ ಯಾವುದೇ ಒಂದು ಕಾರ್ಯವನ್ನು ಕೈಗೆತ್ತಿಕೊಳ್ಳುವಾಗ ಎಲ್ಲವೂ ನನ್ನದೇ ನಿಯಂತ್ರಣದಲ್ಲಿದೆ ಎಂಬ ಭಾವವನ್ನು ನಾವು ಹೊಂದಿರುತ್ತೇವೆ. ಆದರೆ, ಪರೀಕ್ಷೆ ಮುಗಿದ ನಂತರ ನಾವು ದೇವರ ಕೈಗೆ ನೀಡಿ ಆತನ ಮೊರೆ ಹೋಗುತ್ತೇವೆ" ಎಂದು ಅವರು ಬರೆದಿದ್ದಾರೆ.

ಮುಖ್ಯ ಆರ್ಥಿಕ ಸಲಹೆಗಾರರಾಗಿ ಕಾರ್ಯನಿರ್ವಹಿಸುವ ಮೊದಲು, ಅವರು ಹೈದರಾಬಾದ್‌ನ ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್‌ನಲ್ಲಿ ಸಹ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಅವರು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ಹಳೆಯ ವಿದ್ಯಾರ್ಥಿ ಆಗಿದ್ದು, ಚಿಕಾಗೋ ವಿಶ್ವವಿದ್ಯಾಲಯದ ಬೂತ್ ಸ್ಕೂಲ್ ಆಫ್ ಬ್ಯುಸಿನೆಸ್‌ನಿಂದ ಪಿಎಚ್‌ಡಿ ಪಡೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News