×
Ad

ಸ್ಪಷ್ಟವಾದ ಇಂಗ್ಲಿಷ್‌ನಲ್ಲಿ ಪ್ರವಾಸಿಗರಿಗೆ ಮಾರ್ಗದರ್ಶನ ನೀಡಿದ ಸೈಕಲ್ ರಿಕ್ಷಾ ಚಾಲಕ: ವಿಡಿಯೊ ವೈರಲ್

Update: 2024-02-11 20:54 IST

Photo: indiatoday.in 

ಹೊಸದಿಲ್ಲಿ: ಸೈಕಲ್ ರಿಕ್ಷಾ ಚಾಲಕನೊಬ್ಬ ದಿಲ್ಲಿಯಲ್ಲಿ ಪ್ರವಾಸಿಗರಿಗೆ ಇಂಗ್ಲಿಷ್‌ನಲ್ಲಿ ಮಾರ್ಗದರ್ಶನ ನೀಡಿರುವುದು ಸಾಮಾಜಿಕ ಮಾಧ್ಯಮ ಬಳಕದಾರರಿಂದ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ. ಎಕ್ಸ್ ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಹಂಚಿಕೊಂಡಿರುವ ವಿಡಿಯೊದಲ್ಲಿ, ರಿಕ್ಷಾ ಚಾಲಕನು ದಿಲ್ಲಿಯ ಪ್ರಖ್ಯಾತ ಪ್ರವಾಸಿ ತಾಣಗಳ ವಿವರವನ್ನು ಸ್ಪಷ್ಟವಾದ ಇಂಗ್ಲಿಷ್ ಭಾಷೆಯಲ್ಲಿ ನೀಡುತ್ತಿರುವುದನ್ನು ನೋಡಬಹುದಾಗಿದೆ ಎಂದು indiatoday.in ವರದಿ ಮಾಡಿದೆ.

ಆ ವಿಡಿಯೊದಲ್ಲಿ ಬ್ರಿಟನ್‌ ನವರೆಂದು ಹೇಳಿಕೊಂಡಿರುವ ಪ್ರವಾಸಿಗರೊಂದಿಗೆ ಜಾಮಾ ಮಸೀದಿ ಹಾಗೂ ಮಸಾಲೆ ಪದಾರ್ಥಗಳ ಏಷ್ಯಾದ ಅತಿ ದೊಡ್ಡ ಮಾರುಕಟ್ಟೆಯಾದ ವರ್ಣರಂಜಿತ ಬೀದಿಗಳ ಕುರಿತು ವ್ಯಕ್ತಿಯೊಬ್ಬ ಮಾತನಾಡುತ್ತಿರುವುದನ್ನು ನೋಡಬಹುದಾಗಿದೆ. ದಾರಿಯ ನಡುವೆ ಇಕ್ಕಟ್ಟು ಮತ್ತು ಕಿರಿದಾದ ರಸ್ತೆಗಳ ಚಿತ್ರವನ್ನು ಸೆರೆ ಹಿಡಿಯಲು ಅಥವಾ ಅಲ್ಲಿಂದ ಏನನ್ನಾದರೂ ಖರೀದಿಸಲು ಬಯಸಿದರೆ ನನಗೆ ತಿಳಿಸಿ ಎಂದು ಸಲಹೆ ನೀಡುತ್ತಿರುವುದೂ ಆ ವಿಡಿಯೊದಲ್ಲಿ ಕಂಡು ಬರುತ್ತದೆ.

ಈ ವಿಡಿಯೊ 1.1 ಲಕ್ಷ ವೀಕ್ಷಣೆಗಳನ್ನು ಗಳಿಸಿದ್ದು, ಬ್ರಿಟನ್‌ನ ಪ್ರವಾಸಿಗರಿಗೆ ಆ ವ್ಯಕ್ತಿ ನೀಡಿರುವ ಮಾರ್ಗದರ್ಶನದಿಂದ ಸಾಮಾಜಿಕ ಮಾಧ್ಯಮ ಬಳಕೆದಾರರು ಪ್ರಭಾವಿತರಾಗಿದ್ದಾರೆ. ಈ ಪೋಸ್ಟ್‌ಗೆ ಸಕಾರಾತ್ಮಕ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ಆ ವ್ಯಕ್ತಿಯ ಇಂಗ್ಲಿಷ್ ಮಾತನಾಡುವ ಕೌಶಲವನ್ನು ಜನರು ಶ್ಲಾಘಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News