×
Ad

ಪುಟಿನ್ ದಿಲ್ಲಿಗೆ ಭೇಟಿ ನೀಡುವ ಮೊದಲೇ ಭಾರತದ ಜೊತೆಗಿನ ಮಹತ್ವದ ರಕ್ಷಣಾ ಒಪ್ಪಂದಕ್ಕೆ ರಶ್ಯಾ ಅನುಮೋದನೆ

Update: 2025-12-03 10:49 IST

ಹೊಸದಿಲ್ಲಿ: ರಶ್ಯಾ ಪಾರ್ಲಿಮೆಂಟ್‌ನ ಕೆಳಮನೆ ಸ್ಟೇಟ್ ಡುಮಾ ಮಂಗಳವಾರ ಭಾರತದೊಂದಿಗಿನ ಪ್ರಮುಖ ರಕ್ಷಣಾ ಒಪ್ಪಂದಕ್ಕೆ ಅನುಮೋದಿಸಿರುವ ಬಗ್ಗೆ ವರದಿಯಾಗಿದೆ.

ಡಿಸೆಂಬರ್ 4 ಮತ್ತು 5ರಂದು ರಶ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ದಿಲ್ಲಿಗೆ ಭೇಟಿ ನೀಡಲಿದ್ದಾರೆ. ಇದಕ್ಕೂ ಮೊದಲೇ ಈ ಅನುಮೋದನೆ ನೀಡಲಾಗಿದೆ.

ಕಳೆದ ಫೆಬ್ರವರಿ 18ರಂದು ಎರಡೂ ದೇಶಗಳ ಸರಕಾರಗಳ ನಡುವೆ ಸಹಿ ಹಾಕಲಾಗಿದ್ದ ಪರಸ್ಪರ ಲಾಜಿಸ್ಟಿಕ್ ಬೆಂಬಲ ವಿನಿಮಯ ಒಪ್ಪಂದ (RELOS)ವನ್ನು ಕಳೆದ ವಾರ ರಶ್ಯಾ ಪ್ರಧಾನಿ ಮಿಖಾಯಿಲ್ ಮಿಶುಸ್ತಿನ್ ಅವರು ಡುಮಾಗೆ ಅನುಮೋದನೆಗಾಗಿ ಕಳುಹಿಸಿಕೊಟ್ಟಿದ್ದರು.

ಭಾರತದೊಂದಿಗಿನ ನಮ್ಮ ಸಂಬಂಧಗಳು ಸಮಗ್ರವಾಗಿದೆ ಮತ್ತು ನಾವು ಅವುಗಳನ್ನು ಬಹಳ ಮೌಲ್ಯಯುತವೆಂದು ಪರಿಗಣಿಸುತ್ತೇವೆ. ಈ ಒಪ್ಪಂದದ ಅನುಮೋದನೆಯು ಪರಸ್ಪರ ಸಂಬಂಧದ ಬಲವರ್ಧನೆಯ ಮತ್ತೊಂದು ಹೆಜ್ಜೆಯಾಗಿದೆ ಎಂದು ಸ್ಟೇಟ್ ಡುಮಾ ಸ್ಪೀಕರ್ ವ್ಯಾಚೆಸ್ಲಾವ್ ವೊಲೊದಿನ್ ಅವರು ಹೇಳಿದ್ದಾರೆ.

RELOS ಒಪ್ಪಂದವು ರಷ್ಯಾದ ಮಿಲಿಟರಿ ರಚನೆಗಳು, ಯುದ್ಧನೌಕೆಗಳು ಮತ್ತು ಮಿಲಿಟರಿ ವಿಮಾನಗಳನ್ನು ಭಾರತಕ್ಕೆ ಕಳುಹಿಸುವ ಕಾರ್ಯವಿಧಾನವನ್ನು ನಿಗದಿಪಡಿಸುತ್ತದೆ. ಇಷ್ಟೇ ಅಲ್ಲದೇ ಪರಸ್ಪರ ಲಾಜಿಸ್ಟಿಕಲ್ ಬೆಂಬಲವನ್ನು ನಿಗದಿಪಡಿಸುತ್ತದೆ. ಈ ಒಪ್ಪಂದವು ರಕ್ಷಣಾ ಪಡೆಗಳು ಮತ್ತು ಸಲಕರಣೆಗಳ ರವಾನೆಯನ್ನು ಮಾತ್ರವಲ್ಲದೆ, ಅವುಗಳ ಲಾಜಿಸ್ಟಿಕ್ಸ್ ಪ್ರಕ್ರಿಯೆಯನ್ನೂ ಕೂಡ ನಿಯಂತ್ರಿಸುತ್ತದೆ ಎಂದು ವರದಿಯಾಗಿದೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News