×
Ad

ವಿಕಲಚೇತನ ಕ್ರಿಕೆಟಿಗ ಅಮೀರ್ ಲೋನ್‌ ರನ್ನು ಭೇಟಿ ಮಾಡಿದ ಸಚಿನ್ ತೆಂಡೂಲ್ಕರ್: ಸಹಿ ಹಾಕಿದ ಬ್ಯಾಟ್ ಉಡುಗೊರೆ

Update: 2024-02-24 21:02 IST

ಸಚಿನ್ ತೆಂಡೂಲ್ಕರ್ | Photo: @sachin_rt

ಶ್ರೀನಗರ: ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ತಮ್ಮ ಭರವಸೆಯನ್ನು ಉಳಿಸಿಕೊಂಡಿದ್ದು, ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ವಿಕಲಚೇತನ ಕ್ರಿಕೆಟಿಗ ಅಮೀರ್ ಲೋನ್‌ ರನ್ನು ಭೇಟಿಯಾದರು.

ಜಮ್ಮು ಮತ್ತು ಕಾಶ್ಮೀರ ಪ್ಯಾರಾ ಕ್ರಿಕೆಟ್ ತಂಡದ ನಾಯಕ ಅಮೀರ್ ಲೋನ್‌  ರನ್ನು ತಮ್ಮ ಹೋಟೆಲ್ ಕೊಠಡಿಗೆ ಆಹ್ವಾನಿಸಿದ ಸಚಿನ್ ತೆಂಡೂಲ್ಕರ್, ಅವರೊಂದಿಗೆ ಮಾತನಾಡಿ, ಅವರಿಗೆ ಸಹಿ ಮಾಡಿದ ಬ್ಯಾಟನ್ನು ಉಡುಗೊರೆಯಾಗಿ ನೀಡಿದರು.

ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ತಮ್ಮಿಬ್ಬರ ನಡುವಿನ ಮಾತುಕತೆಯ ವೀಡಿಯೊವನ್ನು ಪೋಸ್ಟ್ ಮಾಡಿರುವ ಸಚಿನ್ ತೆಂಡೂಲ್ಕರ್, "ಅಮೀರ್‌ಗಾಗಿ, ನೈಜ ಹೀರೊ. ಸ್ಫೂರ್ತಿ ತುಂಬುತ್ತಲೇ ಇರಿ! ನಿಮ್ಮನ್ನು ಭೇಟಿಯಾಗಿದ್ದು ಸಂತಸವಾಗಿದೆ" ಎಂದು ಬರೆದುಕೊಂಡಿದ್ದಾರೆ.

ಅಮೀರ್ ಅವರ ಕ್ರಿಕೆಟ್ ಪಯಣದ ಕುರಿತು ಇಬ್ಬರೂ ಮಾತುಕತೆಯಾಡಿದ್ದು, ಸಚಿನ್ ತೆಂಡೂಲ್ಕರ್ ನನ್ನ ಸ್ಫೂರ್ತಿ ಎಂದು ವಿಕಲಚೇತನ ಕ್ರಿಕೆಟಿಗ ಅಮೀರ್ ಈ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ. ಅಮೀರ್ ಅವರ ಜೀವನ ಪಯಣದ ಕತೆ ಕೇಳಿ ಭಾವುಕರಾದ ಸಚಿನ್ ತೆಂಡೂಲ್ಕರ್, ಅವರ ಕುಟುಂಬದ ಸದಸ್ಯರೊಂದಿಗೂ ಮಾತನಾಡಿ, ಅವರೊಂದಿಗೆ ಭಾವಚಿತ್ರ ತೆಗೆಸಿಕೊಂಡರು.

ಇದಕ್ಕೂ ಮುನ್ನ, ಅಮೀರ್ ಕ್ರಿಕೆಟ್ ಆಡುತ್ತಿರುವ ವೀಡಿಯೊಗೆ ಪ್ರತಿಕ್ರಿಯಿಸಿದ್ದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ಒಂದು ದಿನ ಜಮ್ಮು ಮತ್ತು ಕಾಶ್ಮೀರ ಪ್ಯಾರಾ ಕ್ರಿಕೆಟ್ ತಂಡದ ನಾಯಕನನ್ನು ಭೇಟಿಯಾಗುವ ಬಯಕೆ ವ್ಯಕ್ತಪಡಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News