×
Ad

Delhi | ಸ್ಟೇಡಿಯಂ ಖಾಲಿ ಮಾಡಿಸಿ ನಾಯಿಯನ್ನು ವಾಕ್ ಮಾಡಿಸಿದ್ದ MCD ಆಯುಕ್ತ ಸಂಜೀವ್ ಖಿರ್ವಾರ್ ಮರುನೇಮಕ

Update: 2026-01-22 09:48 IST

ಹೊಸದಿಲ್ಲಿ, ಜ. 22: ತ್ಯಾಗರಾಜ್ ಕ್ರೀಡಾಂಗಣವನ್ನು ಸಾರ್ವಜನಿಕರಿಗೆ ಖಾಲಿ ಮಾಡಿ ತಮ್ಮ ನಾಯಿಯನ್ನು ವಾಕ್ ಮಾಡಿಸಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ 2022ರಲ್ಲಿ ಲಡಾಖ್‌ ಗೆ ವರ್ಗಾಯಿಸಲ್ಪಟ್ಟಿದ್ದ 1994ರ ಬ್ಯಾಚ್‌ ನ IAS ಅಧಿಕಾರಿ ಸಂಜೀವ್ ಖಿರ್ವಾರ್ ಅವರನ್ನು ಮುನ್ಸಿಪಲ್ ಕಾರ್ಪೊರೇಷನ್ ಆಫ್ ದಿಲ್ಲಿ (ಎಂಸಿಡಿ)ಯ ಆಯುಕ್ತರಾಗಿ ನೇಮಕ ಮಾಡಲಾಗಿದೆ.

ಈ ನೇಮಕಾತಿಯನ್ನು ಕೇಂದ್ರ ಗೃಹ ಸಚಿವಾಲಯ ಬುಧವಾರ ಪ್ರಕಟಿಸಿದ್ದು, ಈ ಕುರಿತು ದಿಲ್ಲಿಯ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರ ಕಚೇರಿಗೆ ಅಧಿಕೃತವಾಗಿ ಮಾಹಿತಿ ನೀಡಲಾಗಿದೆ.

2022ರಲ್ಲಿ ದಿಲ್ಲಿಯ ತ್ಯಾಗರಾಜ್ ಕ್ರೀಡಾಂಗಣವನ್ನು ಕ್ರೀಡಾಪಟುಗಳ ಬಳಕೆಗೆ ಮುಚ್ಚಿ, ವೈಯಕ್ತಿಕ ಉದ್ದೇಶಕ್ಕಾಗಿ ಬಳಸಿದ್ದಾರೆಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದವು. ಈ ಹಿನ್ನೆಲೆ ಅವರನ್ನು ಲಡಾಖ್‌ ಗೆ ವರ್ಗಾಯಿಸಲಾಗಿತ್ತು.

ಇದೇ ವೇಳೆ, ಪ್ರಸ್ತುತ ಎಂಸಿಡಿ ಆಯುಕ್ತರಾಗಿದ್ದ 1992ರ ಬ್ಯಾಚ್‌ನ ಐಎಎಸ್ ಅಧಿಕಾರಿ ಅಶ್ವನಿ ಕುಮಾರ್ ಅವರನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ವರ್ಗಾಯಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News