×
Ad

ಬಾಂಗ್ಲಾದೇಶದ ಟಿ–20 ವಿಶ್ವಕಪ್ ಪಂದ್ಯಗಳ ಆತಿಥ್ಯಕ್ಕೆ ಒಲವು ತೋರಿದ Pak!

Update: 2026-01-21 21:52 IST

Photo Credit : PTI 

ಲಾಹೋರ್, ಜ.21: ಮುಂಬರುವ ಟಿ–20 ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶ ಕ್ರಿಕೆಟ್ ತಂಡದ ಭಾಗವಹಿಸುವಿಕೆ ಕುರಿತ ಪ್ರಶ್ನೆಗಳಿಗೆ ಇನ್ನೂ ಸ್ಪಷ್ಟ ಉತ್ತರ ಲಭಿಸಿಲ್ಲ. ಬಾಂಗ್ಲಾದೇಶ ತಂಡವು ಭಾರತ ಅಥವಾ ಶ್ರೀಲಂಕಾ ನೆಲದಲ್ಲಿ ಆಡದೇ ಇದ್ದರೆ, ತಾನು ವಿಶ್ವಕಪ್ ಪಂದ್ಯಗಳ ಆತಿಥ್ಯ ವಹಿಸುವುದಾಗಿ ಪಾಕಿಸ್ತಾನ ಪರ್ಯಾಯ ಆಯ್ಕೆಯನ್ನು ನೀಡಿದೆ.

‘ಸುರಕ್ಷತೆಯ ಕಳವಳ’ದಿಂದಾಗಿ ಭಾರತದಲ್ಲಿ ತನ್ನ ಟಿ–20 ವಿಶ್ವಕಪ್ ಪಂದ್ಯಗಳನ್ನು ಆಡಲು ನಿರಾಕರಿಸಿರುವ ಬಾಂಗ್ಲಾದೇಶಕ್ಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಬೆಂಬಲ ವ್ಯಕ್ತಪಡಿಸಿದೆ. ಬಾಂಗ್ಲಾದೇಶದ ವಿಶ್ವಕಪ್ ಪಂದ್ಯಗಳನ್ನು ತಾನು ಆಯೋಜಿಸಲು ಸಿದ್ಧವಿರುವುದಾಗಿ ಐಸಿಸಿಗೆ ತಿಳಿಸಿದೆ.

ಐಸಿಸಿಯೊಂದಿಗೆ ನಡೆದ ಅಧಿಕೃತ ಮಾತುಕತೆಯ ಮೂಲಕ ಪಿಸಿಬಿ ತನ್ನ ಆಫರ್ ಅನ್ನು ಮುಂದಿಟ್ಟಿದೆ. ವೇಳಾಪಟ್ಟಿಯ ಪ್ರಕಾರ ಬಾಂಗ್ಲಾದೇಶ ತಂಡವು ತನ್ನ ಎಲ್ಲಾ ನಾಲ್ಕು ಗುಂಪು ಹಂತದ ಪಂದ್ಯಗಳನ್ನು ಕೋಲ್ಕತಾ ಹಾಗೂ ಮುಂಬೈನಲ್ಲಿ ಆಡಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News