×
Ad

ಪಾಕ್‌ ದಾಳಿಯಿಂದ ಭಾರತಕ್ಕೆ ಹಾನಿಯಾಗಿರುವ ಬಗ್ಗೆ ಪುರಾವೆ ತೋರಿಸಿ: ವಿದೇಶಿ ಮಾಧ್ಯಮಗಳಿಗೆ ಅಜಿತ್ ದೋವಲ್ ಸವಾಲು

Update: 2025-07-11 19:40 IST

Photo | NDTV

ಹೊಸದಿಲ್ಲಿ : ಆಪರೇಷನ್ ಸಿಂಧೂರ್ ಕುರಿತ ವರದಿ ಬಗ್ಗೆ ವಿದೇಶಿ ಮಾಧ್ಯಮಗಳನ್ನು ತರಾಟೆಗೆ ತೆಗೆದುಕೊಂಡ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಪಾಕಿಸ್ತಾನದ ದಾಳಿಯಿಂದ ಭಾರತದ ಮೂಲಸೌಕರ್ಯಕ್ಕೆ ಹಾನಿಯಾಗಿದೆ ಎಂಬುದಕ್ಕೆ ಒಂದೇ ಒಂದು ಪುರಾವೆ ನೀಡಿ ಎಂದು ಸವಾಲು ಹಾಕಿದ್ದಾರೆ.

ಆಪರೇಷನ್ ಸಿಂಧೂರ್ ಭಾರತಕ್ಕೆ ಹೆಮ್ಮೆಯ ಕ್ಷಣ ಎಂದು ಶ್ಲಾಘಿಸಿದ ಅಜಿತ್ ದೋವಲ್, ಈ ಕಾರ್ಯಚರಣೆಯ ವೇಳೆ ಭಾರತದಲ್ಲಿ ಹಾನಿಯಾಗಿದೆ ಎಂಬ ವಿದೇಶಿ ಮಾಧ್ಯಮಗಳ ವರದಿಗಳನ್ನು ತಳ್ಳಿಹಾಕಿದ್ದಾರೆ. ಭಾರತಕ್ಕೆ ಹಾನಿಯಾಗಿರುವುದಕ್ಕೆ ಪುರಾವೆಯಾಗಿ ಒಂದು ಫೋಟೋವನ್ನು ನನಗೆ ತೋರಿಸಿ. ಅವರ ದಾಳಿಯಿಂದ ಕನಿಷ್ಠ ಒಂದು ಗಾಜು ಮುರಿದಿದ್ದರೆ ತೋರಿಸಿ ಎಂದು ದೋವಲ್ ಹೇಳಿದರು.

ಐಐಟಿ ಮದ್ರಾಸ್‌ನ 62ನೇ ಘಟಿಕೋತ್ಸವದಲ್ಲಿ ಆಪರೇಷನ್ ಸಿಂಧೂರ್ ಬಗ್ಗೆ ಮಾತನಾಡಿದ ಅಜಿತ್ ದೋವಲ್, ಭಾರತದ ಬಗ್ಗೆ ವರದಿ ಮಾಡುವಲ್ಲಿ ವಿದೇಶಿ ಮಾಧ್ಯಮಗಳ 'ಪಕ್ಷಪಾತ'ವನ್ನು ಪ್ರಶ್ನಿಸಿದರು. ವಿದೇಶಿ ಮಾಧ್ಯಮಗಳು ಪಾಕಿಸ್ತಾನ ಇದನ್ನು ಮಾಡಿತು, ಅದನ್ನು ಮಾಡಿತು ಎಂದು ವರದಿ ಮಾಡಿದೆ. ಆದರೆ, ಫೋಟೊಗಳು ಭಾರತೀಯ ವಾಯುಪಡೆ ಪಾಕಿಸ್ತಾನದ ನೆಲೆಗಳ ಮೇಲೆ ಮಾಡಿದ ಹಾನಿಯನ್ನು ಮಾತ್ರ ತೋರಿಸುತ್ತದೆ ಎಂದು ಹೇಳಿದರು.

ಪಹಲ್ಗಾಮ್‌ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತೀಯ ವಾಯುಪಡೆ ಪಾಕಿಸ್ತಾನದಲ್ಲಿನ ಭಯೋತ್ಪಾದಕರ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದೆ. ಈ ವೇಳೆ ಪಾಕಿಸ್ತಾನ ಭಾರತದ ಮೇಲೆ ದಾಳಿ ಮಾಡಲು ಯತ್ನಿಸಿದೆ. ಆದರೆ ಪಾಕ್‌ ದಾಳಿಯನ್ನು ವಿಫಲಗೊಳಿಸುವಲ್ಲಿ ಭಾರತ ಯಶಸ್ವಿಯಾಗಿದೆ.  

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News