×
Ad

ದಿಲ್ಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತ : ಮೃತರ ಮಾಹಿತಿ ಬಿಡುಗಡೆ ಮಾಡಿದ ದಿಲ್ಲಿ ಪೊಲೀಸರು

Update: 2025-02-16 13:08 IST

Photo | PTI

ಹೊಸದಿಲ್ಲಿ : ದಿಲ್ಲಿ ರೈಲು ನಿಲ್ದಾಣದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತ 18 ಮಂದಿಯ ಹೆಸರು ಮತ್ತು ಮಾಹಿತಿಯನ್ನು ದಿಲ್ಲಿ ಪೊಲೀಸರು ಬಿಡುಗಡೆ ಮಾಡಿದ್ದಾರೆ.

ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ತೆರಳಲು ಪ್ರಯಾಣಿಕರು ದಿಲ್ಲಿ ರೈಲ್ವೆ ನಿಲ್ದಾಣದಲ್ಲಿ ಜಮಾಯಿಸಿದ್ದರು. ಹೆಚ್ಚಿನ ಜನಸಂದಣಿ, ರೈಲು ವಿಳಂಬ ಸೇರಿದಂತೆ ಹಲವು ಕಾರಣಗಳಿಂದ ರೈಲು ನಿಲ್ದಾಣದಲ್ಲಿ ನೂಕು ನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿದೆ. ಕಾಲ್ತುಳಿತಕ್ಕೆ ಸ್ಪಷ್ಟವಾದ ಕಾರಣ ತನಿಖೆಯ ಬಳಿಕ ತಿಳಿದು ಬರಲಿದೆ ಎಂದು ದಿಲ್ಲಿ ಪೊಲೀಸರು ತಿಳಿಸಿದ್ದಾರೆ. ಕಾಲ್ತುಳಿತದಲ್ಲಿ 79ರ ಹರೆಯದ ಹಿರಿಯ ವ್ಯಕ್ತಿ ಸೇರಿದಂತೆ 18 ಮಂದಿ ಮೃತಪಟ್ಟಿದ್ದಾರೆ.

ಬಿಹಾರದ ಆಹಾ ದೇವಿ(79), ಪೂನಂ ದೇವಿ(40), ಲಲಿತಾ ದೇವಿ(35), ಸುರುಚಿ(11), ಕೃಷ್ಣಾದೇವಿ(40), ವಿಜಯ್ ಸಾಹ್(15), ನೀರಜ್(12), ಶಾಂತಿ ದೇವಿ(40), ಪೂಜಾ ಕುಮಾರ್(8), ದಿಲ್ಲಿಯ ಪಿಂಕಿ ದೇವಿ (41), ಶೀಲಾ ದೇವಿ(50), ವ್ಯೋಮ್(25), ಮಮತಾ ಝಾ(40), ರಿಯಾ ಸಿಂಗ್(7), ಬೇಬಿ ಕುಮಾರಿ(24), ಮನೋಜ್(47), ಹರ್ಯಾಣದ ಸಂಗೀತಾ ಮಲಿಕ್( 34), ಮಹಾವೀರ್ ಎನ್‌ಕ್ಲೇವ್‌ನ ಪೂನಂ(34) ಮೃತರು ಎಂದು ದಿಲ್ಲಿ ಪೊಲೀಸರು ಮೃತರ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News