×
Ad

ಎಪ್ಸ್ಟೀನ್ ಕಡತದಲ್ಲಿ ಭಾರತೀಯ ರಾಜಕಾರಣಿಗಳ ಹೆಸರು?; ಸುಬ್ರಮಣಿಯನ್ ಸ್ವಾಮಿ ಸ್ಪೋಟಕ ಮಾಹಿತಿ!

ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲು ಸಭೆ ಕರೆಯುವಂತೆ ಬಿಜೆಪಿಗೆ ಆಗ್ರಹ

Update: 2025-11-28 16:59 IST

 ಸುಬ್ರಮಣಿಯನ್ ಸ್ವಾಮಿ | Photo : PTI 

ಹೊಸದಿಲ್ಲಿ : ಅಮೆರಿಕದಲ್ಲಿ ಕೆಲ ಭಾರತೀಯ ರಾಜಕಾರಣಿಗಳು ಕೂಡ ಅಕ್ರಮ ಲೈಂಗಿಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎನ್ನುವ ಹೊಸ ಅಂತಾರಾಷ್ಟ್ರೀಯ ಹಗರಣ ಬಯಲಾಗುತ್ತಿದೆ. ಇದರಿಂದ ನಮ್ಮ ದೇಶದ ಪ್ರತಿಷ್ಠೆಗೆ ಹಾನಿಯಾಗುವ ಸಾಧ್ಯತೆ ಇದೆ ಎಂದು ಮಾಜಿ ಸಂಸದ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ಪ್ರಕರಣದ ಕಡತಗಳನ್ನು ಬಿಡುಗಡೆ ಮಾಡುವ ಮಸೂದೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಂಕಿತ ಹಾಕರುವ ಬೆನ್ನಲ್ಲೇ ಈ ಕಡತದ ಬಿಡುಗಡೆ ಭಾರತದಲ್ಲೂ ಬಿರುಗಾಳಿ ಎಬ್ಬಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಈ ಕಡತದಲ್ಲಿ ಭಾರತದ ಕೆಲ ರಾಜಕಾರಾಣಿಗಳ ಹೆಸರು ಕೂಡ ಇದೆ ಎಂದು ಬಿಜೆಪಿ ನಾಯಕ, ಮಾಜಿ ಸಂಸದ ಸುಬ್ರಮಣಿಯನ್ ಸ್ವಾಮಿ ಹೇಳಿಕೊಂಡಿದ್ದಾರೆ.

ಈ ಕುರಿತು ಫೇಸ್‌ ಬುಕ್‌ನಲ್ಲಿ ಪೋಸ್ಟ್‌ ಮಾಡಿರುವ ಸುಬ್ರಮಣಿಯನ್ ಸ್ವಾಮಿ, ಲೋಕಸಭೆ ಅಥವಾ ರಾಜ್ಯಸಭೆಯಲ್ಲಿ 5ಕ್ಕಿಂತ ಹೆಚ್ಚು ಬಾರಿ ಸಂಸದರಾಗಿದ್ದವರನ್ನು ಕರೆದು ಸಭೆ ನಡೆಸುವುದು ಬಿಜೆಪಿಯ ಹಿತದೃಷ್ಟಿಂದ ಅತ್ಯಂತ ಪ್ರಮುಖವಾಗಿದೆ. ಏಕೆಂದರೆ ಅಮೆರಿಕದಲ್ಲಿ ಕೆಲವು ಭಾರತೀಯ ರಾಜಕಾರಣಿಗಳು ಕೂಡ ಅಕ್ರಮ ಲೈಂಗಿಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆಂಬ ಹೊಸ ಅಂತಾರಾಷ್ಟ್ರೀಯ ಹಗರಣ ಬಯಲಾಗುತ್ತಿದೆ. ಈ ಲೈಂಗಿಕ ಹಗರಣದಲ್ಲಿ ಭಾಗಿಯಾಗಿರುವ ರಾಜಕಾರಣಿಗಳ ಫೋಟೊಗಳು ಶೀಘ್ರದಲ್ಲೇ ಅಮೆರಿಕದ ಪ್ರತಿಷ್ಠಿತ ಪತ್ರಿಕೆಗಳಲ್ಲಿ ಪ್ರಕಟವಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಇದು ಭಾರತೀಯ ರಾಜಕಾರಣಿಗಳಿಗೆ ಮತ್ತು ನಮ್ಮ ದೇಶದ ಪ್ರತಿಷ್ಠೆಗೆ ಹಾನಿ ಮಾಡುವ ಸಾಧ್ಯತೆ ಇರುವುದರಿಂದ ಬಿಜೆಪಿ ಇದಕ್ಕೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲು ಸಭೆ ನಡೆಸುವುದು ಮುಖ್ಯವಾಗಿದೆ ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

ಎಪ್ಸ್ಟೀನ್ ಕಡತಗಳ ಪಾರದರ್ಶಕ ಕಾಯ್ದೆಗೆ ಅಮೆರಿಕದ ಸೆನೆಟ್ ಒಪ್ಪಿಗೆ ನೀಡಿತ್ತು. ಆರಂಭದಲ್ಲಿ ಟ್ರಂಪ್ ವಿರೋಧಿಸಿದರೂ ತನ್ನದೇ ಪಕ್ಷದ ರಾಜಕೀಯ ಒತ್ತಡಕ್ಕೆ ಮಣಿದು ಎಪ್ಸ್ಟೀನ್ ಪ್ರಕರಣದ ಕಡತಗಳನ್ನು ಬಿಡುಗಡೆ ಮಾಡುವ ಮಸೂದೆಗೆ ಟ್ರಂಪ್ ಸಹಿ ಹಾಕಿದ್ದರು.

ಇದರಿಂದ ನ್ಯಾಯಾಂಗ ಇಲಾಖೆಯು ಎಪ್ಸ್ಟೀನ್‌ಗೆ ಸಂಬಂಧಿಸಿದ ಎಲ್ಲಾ ಕಡತಗಳು ಮತ್ತು ಪತ್ರ ವ್ಯವಹಾರಗಳು ಹಾಗೂ 2019ರಲ್ಲಿ ಫೆಡರಲ್ ಜೈಲಿನಲ್ಲಿ ನಡೆದ ಅವರ ಸಾವಿನ ಕುರಿತು ತನಿಖೆಗೆ ಸಂಬಂಧಿಸಿದ ಮಾಹಿತಿಗಳನ್ನು ಬಿಡುಗಡೆ ಮಾಡಬೇಕಾಗಿದೆ. ಈ ಕಡತಗಳ ಬಿಡುಗಡೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News