×
Ad

ಬಿಹಾರ ಚುನಾವಣೆ | ತೇಜ್‌ ಪ್ರತಾಪ್ ಯಾದವ್‌ ಗೆ ಸೋಲು

Update: 2025-11-14 20:09 IST

ತೇಜ್ ಪ್ರತಾಪ್ ಯಾದವ್ | Photo Credit : PTI 

ಪಾಟ್ನಾ : ಬಿಹಾರದ ಮಹುವಾ ಕ್ಷೇತ್ರದಲ್ಲಿ ಲಾಲು ಪ್ರಸಾದ್ ಯಾದವ್‌ ಅವರ ಪುತ್ರ ಹಾಗೂ ಜನಶಕ್ತಿ ಜನತಾ ದಳದ (ಜೆಜೆಡಿ) ಸ್ಥಾಪಕ ತೇಜ್‌ ಪ್ರತಾಪ್‌ ಯಾದವ್‌ ಸೋಲನ್ನು ಅನುಭವಿಸಿದ್ದಾರೆ.

ಎಲ್‌ಜೆಪಿಯ ಸಂಜಯ ಕುಮಾರ್‌ ಸಿಂಗ್ ಅವರು 45,000ಕ್ಕೂ ಅಧಿಕ ಮತಗಳ ಅಂತರದಿಂದ ಆರ್‌ಜೆಡಿಯ ಹಾಲಿ ಶಾಸಕ ಮುಕೇಶ ಕುಮಾರ್‌ ರೌಶನ್ ಅವರಿಗೆ ಸೋಲನುಣ್ಣಿಸಿದ್ದಾರೆ. ತೇಜ್‌ ಪ್ರತಾಪ್‌ ಯಾದವ್‌ ಮೂರನೇ ಸ್ಥಾನಕ್ಕಿಳಿದಿದ್ದಾರೆ.

ಸೋಲನ್ನೊಪ್ಪಿಕೊಂಡ ತೇಜ್‌ ಪ್ರತಾಪ್‌ ಅವರು,ಬಿಹಾರವು ಒಳ್ಳೆಯ ಆಡಳಿತಕ್ಕೆ ಬದ್ಧವಾದ ಸರಕಾರವನ್ನು ಆಯ್ಕೆ ಮಾಡಿದೆ ಮತ್ತು ಜನತೆಯ ತೀರ್ಪನ್ನು ತಾನು ಗೌರವಿಸುತ್ತೇನೆ ಎಂದು ಹೇಳಿದರು. ಮುಂದೆಯೂ ತಾನು ರಚನಾತ್ಮಕ ಪಾತ್ರವನ್ನು ವಹಿಸುವುದಾಗಿ ಪಣ ತೊಟ್ಟ ಅವರು,ಮಹುವಾ ಕ್ಷೇತ್ರದಲ್ಲಿ ಬಿಜೆಪಿಯ ಗೆಲುವು ಪ್ರಧಾನಿ ನರೇಂದ್ರ ಮೋದಿಯವರ ಅದ್ಭುತ ನಾಯಕತ್ವ ಮತ್ತು ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ಆಡಳಿತದಲ್ಲಿ ಜನತೆಯ ನಂಬಿಕೆಗೆ ಸಿಕ್ಕಿರುವ ಗೌರವವಾಗಿದೆ ಎಂದರು.

ಜೆಜೆಡಿ 21 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು.

ತೇಜ್‌ ಪ್ರತಾಪ್‌ ವೈಶಾಲಿ ಜಿಲ್ಲೆಯ ಮಹುವಾ ವಿಧಾನಸಭಾ ಕ್ಷೇತ್ರದಿಂದ 2015ರಲ್ಲಿ ಆರ್‌ಜೆಡಿ ಶಾಸಕರಾಗಿ ಆಯ್ಕೆಯಾಗಿದ್ದರು. 2020ರಲ್ಲಿ ಮುಕೇಶ ಕುಮಾರ್‌ ರೌಶನ್ ಈ ಕ್ಷೇತ್ರದ ಮೇಲೆ ಆಧಿಪತ್ಯ ಸಾಧಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News