×
Ad

ಭಯೋತ್ಪಾದಕ ಪನ್ನುನ್‌ ಏರ್ ಇಂಡಿಯಾಕ್ಕೆ ನೀಡಿದ ಬೆದರಿಕೆ ಗಂಭೀರವಾದುದು; ಗುಪ್ತಚರ ಮೂಲ

Update: 2023-11-06 22:26 IST

ಖಾಲಿಸ್ತಾನಿ ಭಯೋತ್ಪಾದಕ ಪನ್ನುನ್ (twitter/OnTheNewsBeat)

ಹೊಸದಿಲ್ಲಿ: ನ. 19 ಹಾಗೂ ಅನಂತರ ಏರ್ ಇಂಡಿಯಾ ವಿಮಾನದಲ್ಲಿ ಸಂಚರಿಸುವವರ ಜೀವಕ್ಕೆ ಅಪಾಯ ಇದೆ ಎಂದು ಕೆನಡಾ ಮೂಲದ ಭಯೋತ್ಪಾದಕ ಸಂಘಟನೆ ಸಿಕ್ಖ್ಸ್ ಫಾರ್ ಜಸ್ಟಿಸ್ (ಎಸ್‌ಎಫ್‌ಜೆ)ನ ನಾಯಕ ಗುರುಪತ್ವಂತ್ ಸಿಂಗ್ ಪನ್ನುನ್‌ನ ಎಚ್ಚರಿಕೆಯನ್ನು ಲಘವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಭಾರತೀಯ ಅತ್ಯುನ್ನತ ಗುಪ್ತಚರ ಮೂಲಗಳು ತಿಳಿಸಿವೆ.

ಪನ್ನೂನ್ ಭಾರತದ ವಿರುದ್ಧ ಯುವಕರನ್ನು ಪ್ರಚೋದಿಸಲು ಪ್ರಯತ್ನಿಸುತ್ತಿದ್ದಾನೆ. ಅಲ್ಲದೆ, 1985ರ ಏರ್ ಇಂಡಿಯಾ ಕನಿಷ್ಕಾ ವಿಮಾನದ ಬಾಂಬ್ ಸ್ಫೋಟವನ್ನು ಪುನರಾವರ್ತಿಸುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಮೂಲಗಳು ತಿಳಿಸಿವೆ.

‘‘ಏರ್ ಇಂಡಿಯಾ ಹಾರಾಟ ನಡೆಸುತ್ತಿರುವ ಪ್ರಮುಖ ನಗರಗಲ್ಲಿ ಹೆಚ್ಚುವರಿ ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆ ನಾವು ನಮ್ಮ ಸಹೋದ್ಯೋಗಿಗಳನ್ನು ಎಚ್ಚರಿಸಿದ್ದೇವೆ. ಪನ್ನುನ್ ಮುಕ್ತವಾಗಿ ಜಗತ್ತಿನಾದ್ಯಂತ ಸಂಚರಿಸುತ್ತಿದ್ದಾನೆ. ಆದರೆ, ಆತನ ವಿರುದ್ಧ ಯಾವೊಂದು ದೇಶವೂ ಕ್ರಮ ತೆಗೆದುಕೊಳ್ಳದೇ ಇರುವುದು ತೀವ್ರ ಆತಂಕಕಾರಿ ವಿಚಾರ’’ ಎಂದು ಉನ್ನತ ಗುಪ್ತಚರ ಮೂಲಗಳು ತಿಳಿಸಿವೆ.

ಪನ್ನೂನ್ ಗಣನೀಯವಾಗಿ ಏನನ್ನೂ ಮಾಡುವ ಸಾಮರ್ಥ್ಯ ಹೊಂದಿಲ್ಲ. ಆದರೂ ಆತ ಭಾರತದ ವಿರುದ್ಧ ಯುವಕರನ್ನು ಉಗ್ರವಾದದೆಡೆಗೆ ಸೆಳೆಯುತ್ತಿದ್ದಾನೆ ಎಂದು ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News